ಬರ ಅಧ್ಯಯನಕ್ಕೆ ಬಂದ ಸಚಿವರಿಗೆ ತರಾಟೆ

ಸೋಮವಾರ, 7 ಜನವರಿ 2019 (18:44 IST)
ಬರ ಅಧ್ಯಯನ ಸಚಿವ ಸಂಪುಟ ಉಪ‌ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಆರ್.ವಿ.ದೇಶಪಾಂಡೆಗೆ ರೈತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಸಚಿವರಿಗೆ, ಬೆಳೆ‌ ಪರಿಹಾರ ಬಂದಿಲ್ಲವೆಂದು ರೈತರು ತರಾಟೆಗೆ ತೆಗೆದುಕೊಂಡರು. ರೈತರನ್ನು ಸಮಾಧಾನ ಪಡಿಸಲು ಯತ್ನಿಸಿದ ಸಚಿವರಿಗೆ ಆಕ್ಷೇಪ ವ್ಯಕ್ತಪಡಿಸಿದ ರೈತರು, ಕಳೆದ ಮೂರು ವರ್ಷಗಳಿಂದ  ಬೆಳೆ ಪರಿಹಾರ ಬಂದಿಲ್ಲ. ಈ ಹಿಂದೆಯೂ ತಾವೇ ಬರ ಅಧ್ಯಯನಕ್ಕೆ ಬಂದಿದ್ರಿ. ಆಗಲೂ ಇದನ್ನೇ ಹೇಳಿದ್ವಿ, ಈಗ ಮತ್ತೆ ನೀವೇ ಬಂದೀರಿ. ಆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಅಂತ ರೈತರು ಅಸಮಾಧಾನ ವ್ಯಕ್ತಪಡಿಸಿದ್ರು.

ಕೂಡಲೇ ಈ ಸಮಸ್ಯೆಗೆ  ಪರಿಹಾರ ಕೊಡಿಸಿ ಎಂದು ರೈತರು ಆಗ್ರಹಿಸಿದ್ರು. ಇದಕ್ಕೆ ಉತ್ತರವಾಗಿ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಸೇರಿದಂತೆ ಇತರೇ ಅಧಿಕಾರಿಗಳಿಗೆ,  ಸಮಸ್ಯೆ ಬಗೆಹರಿಸುವಂತೆ ಸಚಿವ ದೇಶಪಾಂಡೆ ಸೂಚಿಸಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ