ನಂಜನಗೂಡಿನಲ್ಲಿ ಭಕ್ತರಿಗೆ ಕನಿಷ್ಠ ಸೌಲಭ್ಯ ಒದಗಿಸುವ ವಿಚಾರಕ್ಕೆ ಬದ್ಧವಿರುವುದಾಗಿ ಸಚಿವ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ಈ ಹಿಂದಿನ ಡಿಸಿ ರಂದೀಪ್ ನೀಡಿದ್ದ ವರದಿಯನ್ನು ಜಾರಿಗೆ ಮಾಡಬೇಕೆಂದು ಮುಜರಾಯಿ ಸಚಿವ ಪರಮೇಶ್ವರ್ ನಾಯ್ಕಗೆ ಮನವಿ ಮಾಡಲಾಗಿದೆ.
ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಮುಖ್ಯಸ್ಥ ಚಂದ್ರಶೇಖರ್‌ರಿಂದ ಮುಜರಾಯಿ ಸಚಿವರಿಗೆ ಮನವಿ ಮಾಡಲಾಗಿದೆ.
ಈ ಸಂದರ್ಭ ಮಾತನಾಡಿದ ಸಚಿವರು, ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಈ ಹಿಂದಿನ ಡಿಸಿಯ ವರದಿ ತರಿಸಿಕೊಳ್ಳುತ್ತೇನೆ. ನಂತರ ಆ ವರದಿಯಲ್ಲೇನಿದೆ? ಇದರಿಂದ ಏನು ಉಪಯೋಗ? ಎಂದು ತಿಳಿಯುತ್ತೇನೆ. ನಂತರ ಈ ಯೋಜನೆ ಅನುಷ್ಠಾನಕ್ಕೆ ತಿಳಿಸುತ್ತೇನೆ ಎಂದು ಹೋರಾಟಗಾರರಿಗೆ ಭರವಸೆ ನೀಡಿದ ಸಚಿವ ಪರಮೇಶ್ವರ್ ನಾಯ್ಕ.
ನಂಜನಗೂಡಿನ ದೇಗುಲದ ಅವ್ಯವಹಾರದ ಹಿನ್ನಲೆಯಲ್ಲಿ ಡಿಜಿಟಲೀಕರಣ ಮಾಡಲಾಗಿತ್ತು. ಅದರಂತೆ ಪಾರ್ಕಿಂಗ್, ಶೌಚಾಲಯ ಕೂಡ ಖಾಸಗಿಯವರಿಗೆ ಟೆಂಡರ್ ಕೊಡದಂತೆ ವರದಿ ನೀಡಲಾಗಿತ್ತು. ಡಿಸಿ ಸೂಚಿಸಿದ್ದ ಅಧಿಕಾರಿಗಳಿಂದ ನೀಡಲಾಗಿದ್ದ ವರದಿ ಯೋಜನೆಯ ಅನುಷ್ಠಾನಕ್ಕೂ ಮುನ್ನವೇ ವರ್ಗಾವಣೆ ಆಗಿದ್ದರು ಡಿ.ರಂದೀಪ್. ಇದರಿಂದಾಗಿ
ಹೋರಾಟಗಾರರಿಗೆ ತೀವ್ರ ಹಿನ್ನಡೆಯಾಗಿತ್ತು. ಈಗ ಸಚಿವರ ಮೊರೆ ಹೋಗಿರುವ ಹೋರಾಟಗಾರರು ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡಿದರು.