ರಾಜ್ಯೋತ್ಸವ ಆಚರಣೆ ವೇಳೆ ತಪ್ಪು ತಪ್ಪಾಗಿ ಕನ್ನಡ ಭಾಷಣ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

Krishnaveni K

ಶುಕ್ರವಾರ, 1 ನವೆಂಬರ್ 2024 (13:27 IST)
Photo Credit: Instagram
ಬೆಂಗಳೂರು: 69 ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಇಂದು ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಡೆದಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಪ್ಪು ತಪ್ಪಾಗಿ ಕನ್ನಡ ಭಾಷಣ ಮಾಡಿದ್ದಾರೆ.

ಶಿಕ್ಷಣ ಸಚಿವರು ಕನ್ನಡ ಭಾಷೆ ಮಾತನಾಡಲು ಪರದಾಡಿದ್ದು ಈ ಮೊದಲೂ ನೋಡಿದ್ದೇವೆ. ಸದನದಲ್ಲೂ ತಪ್ಪು ತಪ್ಪಾಗಿ ಕನ್ನಡ ಓದಿದ್ದಾರೆ. ಇದೀಗ ರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಭಾಷಣ ಮಾಡುವಾಗ ಕೆಲವೊಂದು ಶಬ್ಧಗಳನ್ನು ತಪ್ಪು ತಪ್ಪಾಗಿ ಉಚ್ಚರಿಸಿ ನಗೆಪಾಟಲಿಗೀಡಾಗಿದ್ದಾರೆ.

ಒಂದೆಡೆ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡ ಕಲಿಯುವ ಪ್ರತಿಜ್ಞೆ ಮಾಡಬೇಕು. ಕನ್ನಡಕ್ಕೆ ಅವಮಾನ ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು. ಆದರೆ ಇತ್ತ ಶಿಕ್ಷಣ ಸಚಿವರೇ ತಪ್ಪಾಗಿ ಕನ್ನಡ ಉಚ್ಚರಿಸಿ ನಗೆಪಾಟಲಿಗೀಡಾಗಿದ್ದಾರೆ.

ಕನ್ನಡ ಶಾಲೆಯ ಉಳಿವಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುತ್ತಾ ಶಿಕ್ಷಣ ಸಚಿವರು, ಸಂಗತಿ ಎನ್ನುವುದಕ್ಕೆ ಸಂಗಾತಿ, ದುರಸ್ಥಿ ಎನ್ನುವುದಕ್ಕೆ ದುಸ್ಥಿತಿ ಎಂಬಿತ್ಯಾದಿ ಹಲವು ಪದ ಪ್ರಯೋಗಗಳನ್ನು ಮಾಡುವಾಗ ತಪ್ಪು ಮಾಡುತ್ತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ