ಮಹಾರಾಷ್ಟ್ರಕ್ಕೆ ಜೈ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ನಾರಾಯಣಗೌಡ

ಗುರುವಾರ, 27 ಫೆಬ್ರವರಿ 2020 (11:18 IST)
ಬೆಂಗಳೂರು : ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈ ಎಂದು ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ.


ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಮುಂಬೈ ಗೆ ಹೋಗಿ ಉದ್ಯಮಿ , ಬಿಲ್ಡರ್ ಆಗಿದ್ದೇನೆ. ಆಮೇಲೆ ಇಲ್ಲಿಗೆ ಬಂದು ರಾಜಕಾರಣಿ ಆಗಿದ್ದೇನೆ. ಅದಕ್ಕಾಗಿ ನಾನು ಜೈ ಮಹಾರಾಷ್ಟ್ರ, ಜೈ ಶಿವಾಜಿ ಎನ್ನುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.


ಅಲ್ಲದೇ ನನ್ನ ದೇಹದಲ್ಲಿ ಶಕ್ತಿ, ತಾಕತ್ತು ಇದೆ ಅಂದ್ರೆ ಅದು ಮಹಾರಾಷ್ಟ್ರದ್ದು ಎಂದು ಸಚಿವ ನಾರಾಯಣಗೌಡರ ಮಹಾರಾಷ್ಟ್ರದ ಬಗೆಗಿನ  ಪ್ರೇಮವನ್ನು ಬಹಿರಂಗಪಡಿಸಿದ್ದಾರೆ. ಈ ಹೇಳಿಕೆ ಇದೀಗ  ವಿವಾದಕ್ಕೆ ಕಾರಣವಾಗಿದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ