ಎಲ್‍ಕೆಜಿ, ಯುಕೆಜಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಇಲ್ಲ ಎಂದ ಸಚಿವ ಎಸ್. ಸುರೇಶ್‍ಕುಮಾರ

ಶನಿವಾರ, 6 ಜೂನ್ 2020 (14:16 IST)
ಆನ್‍ಲೈನ್  ಶಿಕ್ಷಣ ನೀಡುವ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಇದು ಒಂದು ರೀತಿ ಗೀಳಾಗಿದೆ. ಆನ್ ಶಿಕ್ಷಣದ ದುಷ್ಪರಿಣಾಮ ಮತ್ತು ಒಳಿತಿನ ಬಗ್ಗೆ ಅಭಿಪ್ರಾಯ ಸಂಗ್ರಹಣೆ ನಡೆಯುತ್ತಿದೆ.

ಮುಂಬರುವ ಸೋಮವಾರ ಜೂ.8 ರಂದು ಈ ಕುರಿತು ಸುದೀರ್ಘ ಚರ್ಚೆ ನಡೆಸಿ, ಯಾವ ತರಗತಿಗಳಿಗೆ ಆನ್ ಲೈನ್ ಶಿಕ್ಷಣ ನೀಡಬೇಕೆಂಬ ಬಗ್ಗೆ ಸರ್ಕಾರ ಆದೇಶ ನೀಡಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ ಹೇಳಿದ್ದಾರೆ.

ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಆನ್  ಶಿಕ್ಷಣ ನೀಡಬಾರದೆಂಬುದು ಈಗಾಗಲೇ ಸರಕಾರದ ನಿರ್ಧಾರವಾಗಿದೆ. ಆದರೆ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಇಲ್ಲವೇ ಕಾಲೇಜು ಮಟ್ಟದಿಂದ ಆನ್‍ಲೈನ್ ತರಗತಿಗಳನ್ನು ಶೈಕ್ಷಣಿಕ ವರ್ಷ ಆರಂಭಿಸುವ  ಮುನ್ನ ತೆಗೆದುಕೊಳ್ಳುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.

ಶೈಕ್ಷಣಿಕ ವರ್ಷವನ್ನು ಆರಂಭಿಸುವ ಕುರಿತು ಇದುವರೆಗೆ ಕೇಂದ್ರ ಸರಕಾರ ಅನುಮತಿ ನೀಡಿಲ್ಲ. ಆದರೂ ರಾಜ್ಯ ಸರಕಾರ ಮಕ್ಕಳ, ಪಾಲಕ ಪೋಷಕರ ಅಭಿಪ್ರಾಯ ಪಡೆದು ಈ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ