ಸಚಿವ ಆರ್.ಶಂಕರ್ ಮನೆಯಲ್ಲಿ ಪೂಜೆ ಮುಗಿಸಿ ಹೊರಟಿದ್ದ ಅರ್ಚಕನನ್ನು ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಹಲ್ಲೆ
ಗುರುವಾರ, 23 ಸೆಪ್ಟಂಬರ್ 2021 (21:44 IST)
ಬೆಂಗಳೂರು: ಮಾಜಿ
ನಡೆಸಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಸೆ .20 ರಂದು ಹುಣ್ಣಿಮೆ ಪ್ರಯುಕ್ತ ಕಲ್ಯಾಣನಗರದಲ್ಲಿರುವ ಮಾಜಿ ಸಚಿವ ಆರ್.ಶಂಕರ್ ತಮ್ಮ ನಿವಾಸದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು. ನಂತರದ ಮನೋರಾಯನಪಾಳ್ಯದ ಅರ್ಚಕ ಮಣಿಕಂಠ ಶರ್ಮಾ ಎಂಬುವರನ್ನು ಪೂಜೆಗೆ ಬರಮಾಡಿಕೊಂಡಿದ್ದರು.
ಮಾಜಿ ಸಚಿವರ ಮನೆಯಲ್ಲಿ ಪೂಜಾ ಕಾರ್ಯ ಮುಗಿಸಿಕೊಂಡು ರಾತ್ರಿ 10.30 ವೇಳೆಗೆ ತಮ್ಮ ಕಾರಿನಲ್ಲಿ ಮನೆಗೆ ತೆರಳುವ ವೇಳೆ ಈ ಅವಘಡದಲ್ಲಿ.
ಹೆಣ್ಣೂರು ಅಂಡರ್ ಪಾಸ್ ಬಳಿ ಹೋಗುವಾಗ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಅರ್ಚಕರ ಕಾರಿಗೆ ಏಕಾಏಕಿ ಗುದ್ದಿದ್ದಾರೆ. ಕಾರು ನಿಲ್ಲಿಸಿ ಮಣಿಕಂಠ ಶರ್ಮಾ ಪ್ರಶ್ನಿಸುತ್ತಿದ್ದಾರೆ.
ಅರ್ಚಕ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಮಚ್ಚು- ಲಾಂಗ್ ತೋರಿಸಿದ್ದಲ್ಲದೇ ಹಲ್ಲೆ ನಡೆಸಿದ್ದಾರೆ. ನಂತರ ಅರ್ಚಕರ ಬಳಿ ಇದ್ದ 60 ಗ್ರಾಂ ತೂಕದ ಚಿನ್ನದ ಸರ, 20 ಸಾವಿರ ನಗದು, ಮೊಬೈಲ್ ಕಸಿದುಕೊಂಡು ಪರಾರಿಯಾಯಿತು.
ಘಟನೆಯಲ್ಲಿ ಗಾಯಗೊಂಡಿದ್ದ ಅರ್ಚಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.