ಕೊರೋನಾ ನಮ್ಮ ಜೊತೆ ಚೆಸ್ ಆಡ್ತಿದೆ: ಆರೋಗ್ಯ ಸಚಿವ ಸುಧಾಕರ್ ಹೇಳಿಕೆ

ಶನಿವಾರ, 24 ಏಪ್ರಿಲ್ 2021 (11:10 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಲೆ ತೀವ್ರಗೊಳ್ಳುತ್ತಿರುವ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.


ಕೊರೋನಾ ನಮ್ಮ ಜೊತೆ ಚೆಸ್ ರೀತಿ ಆಟವಾಡ್ತಿದೆ. ಹಿಂದೆ ಈ ಪರಿಸ್ಥಿತಿಯಿರಲಿಲ್ಲ. ಕೊರೋನಾ ಎರಡನೇ ಅಲೆ ಕಳೆದ ಬಾರಿಗಿಂತ ತೀವ್ರವಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

ಕಳೆದ ಬಾರಿ ಆಮ್ಲಜನಕಕ್ಕೆ ಇಷ್ಟೊಂದು ಬೇಡಿಕೆಯಿರಲಿಲ್ಲ. ಆದರೆ ಈ ಬಾರಿ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಿದೆ. ಕೊರೋನಾ ವೈರಸ್ ತನ್ನ ಸ್ವರೂಪವನ್ನೇ ಬದಲಿಸಿದೆ ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ