ಐಪಿಎಲ್ 14: ಅಂಕಪಟ್ಟಿಯಲ್ಲಿ ಈಗ ಆರ್ ಸಿಬಿಯೇ ಟಾಪ್ 1

ಶನಿವಾರ, 24 ಏಪ್ರಿಲ್ 2021 (10:03 IST)
ಮುಂಬೈ: ಐಪಿಎಲ್ 14 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕನಸಿನ ಆರಂಭ ಪಡೆದಿದೆ. ಆಡಿದ ನಾಲ್ಕು ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ.


ನಾಲ್ಕು ಪಂದ್ಯಗಳಿಂದ ನಾಲ್ಕನ್ನೂ ಗೆದ್ದು ಆರ್ ಸಿಬಿ ಈಗ 8 ಅಂಕ ಸಂಪಾದಿಸಿದೆ. ಸೋಲರಿಯದ ಏಕೈಕ ತಂಡವಾಗಿರುವ ಆರ್ ಸಿಬಿ ಈಗ ಅಗ್ರ ಸ್ಥಾನಿಯಾಗಿದ್ದರೆ, ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಟ್ಟು ಮೂರು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಮೂರನೇ ಸ್ಥಾನದಲ್ಲಿದೆ.

ಇನ್ನು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಲ್ಕರಲ್ಲಿ ಕೇವಲ 2 ಪಂದ್ಯ ಗೆದ್ದಿದ್ದು, 4 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹಾಗಿದ್ದರೂ ಇದು ಆರಂಭಿಕ ಹಂತವಾಗಿದ್ದು, ಕೊನೆಯ ಹಂತದಲ್ಲಿ ಏನು ಬೇಕಾದರೂ ನಡೆಯಬಹುದು. ಕಳೆದ ಆವೃತ್ತಿಯಲ್ಲೂ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತಂಡಗಳು ಅಂತಿಮ ಹಂತದಲ್ಲಿ ಸೋತಿದ್ದವು. ಆದರೆ ಸದ್ಯಕ್ಕಂತೂ ಆರ್ ಸಿಬಿ ಅಭಿಮಾನಿಗಳಿಗೆ ಚಾಂಪಿಯನ್ ಆಗುವ ಕನಸು ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ