ಕೊರೋನಾಪೀಡಿತ ಭಾರತಕ್ಕೆ ನೆರವು ನೀಡಲು ಮುಂದೆ ಬಂದ ಪಾಕ್

ಶನಿವಾರ, 24 ಏಪ್ರಿಲ್ 2021 (10:14 IST)
ನವದೆಹಲಿ: ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಹಾಯ ಮಾಡಲು ನಾವು ಸಿದ್ಧ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ ಫೈಸಲ್ ಎಧಿ ಹೇಳಿದ್ದಾರೆ.


ಅಷ್ಟೇ ಅಲ್ಲ ತಮ್ಮ ಫೌಂಡೇಷನ್ ಮೂಲಕ ಭಾರತಕ್ಕೆ 50 ಆಂಬ್ಯುಲೆನ್ಸ್ ಮತ್ತು ಸ್ವಯಂ ಕಾರ್ಯಕರ್ತರನ್ನು ಕಳುಹಿಸಲು ಒಪ್ಪಿಗೆ ನೀಡಿ ಎಂದು ಫೈಸಲ್ ಭಾರತದ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

‘ನಾವು ನಮ್ಮ ತಾಂತ್ರಿಕ ತಂಡದೊಂದಿಗೆ ಭಾರತಕ್ಕೆ ಸಹಾಯ ಮಾಡಲು ಸಿದ್ಧರಿದ್ದೇವೆ. ಬದಲಾಗಿ ನಾವು ಏನನ್ನೂ ನಿರೀಕ್ಷಿಸಲ್ಲ. ನಮ್ಮ ತಂಡದವರಿಗೆ ಬೇಕಾದ ಆಹಾರ, ವಸತಿ, ವಾಹನಕ್ಕೆ ಬೇಕಾದ ಇಂಧನ ಎಲ್ಲವನ್ನೂ ನಾವೇ ನೋಡಿಕೊಳ್ಳುತ್ತೇವೆ’ ಎಂದು ಫೈಸಲ್ ಪತ್ರದಲ್ಲಿ ಹೇಳಿದ್ದಾರೆ. ಆದರೆ ಭಾರತ ಈ ಆಹ್ವಾನವನ್ನು ಒಪ್ಪುವ ಸಾಧ‍್ಯತೆಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ