ನಂದಿ ಗಿರಿಧಾಮಕ್ಕೆ ಸಚಿವ ಸುಧಾಕರ್ ಭೇಟಿ
ನಂದಿಗಿರಿಧಾಮಕ್ಕೆ ರೋಪ್ವೇ ನಿರ್ಮಾಣ ಹಿನ್ನೆಲೆ ಇಂದು ನಂದಿಗಿರಿಧಾಮಕ್ಕೆ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ನಂದಿಬೆಟ್ಟದ ತಪ್ಪಲಲ್ಲಿ ಅಧಿಕಾರಿಗಳೊಂದಿಗೆ ಸಚಿವ ಸುಧಾಕರ್ ಪರಿಶೀಲನೆ ನಡೆಸಿದ್ದಾರೆ.. ಸರಿಸುಮಾರು 92 ಕೋಟಿ ರೂಪಾಯಿ ವೆಚ್ಚದಲ್ಲಿ ರೋಪ್ವೇ ನಿರ್ಮಾಣವಾಗುತ್ತಿದ್ದು, ವಾಹನದಟ್ಟಣೆ ತಪ್ಪಿಸಲು ರೋಪ್ವೇ ನಿರ್ಮಾಣ ಮಾಡಲಾಗುತ್ತಿದೆ..