ಮಲ್ಲಮ್ಮನ ಮೃತದೇಹ ನೋಡಲು ಬಂದ ಸಚಿವ

ಭಾನುವಾರ, 16 ಡಿಸೆಂಬರ್ 2018 (19:55 IST)
ಸಳ್ವಾಡಿ ಮಾರಮ್ಮ ದೇವಾಲಯದಲ್ಲಿ ವಿಷಪ್ರಸಾದ ಸೇವಿಸಿರುವ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಮಲ್ಲಮ್ಮನ ಶವ ನೋಡಲು ಸಚಿವ ಆಗಮಿಸಿದ್ದರು.

ಆಪೋಲೋ ಆಸ್ಪತ್ರೆಯಲ್ಲಿ ಮೃತಪಟ್ಟ ಮಲ್ಲಮ್ಮ ಸಂಬಂಧಿಕರಲ್ಲಿ‌ ಆಕ್ರಂದನ ಮುಗಿಲು ಮುಟ್ಟಿತ್ತು.  ಮಲ್ಲಮ್ಮನ‌ ಮೃತದೇವವನ್ನ ನೋಡಲು ಸಚಿವ ಜಿ.ಟಿ. ದೇವೇಗೌಡ, ಸಂಸದ ಧ್ರುವನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಸಚಿವ ಜಿ.ಟಿ. ದೇವೇಗೌಡರ ಕಾಲಿಗೆ ಬಿದ್ದು ಗಳಗಳನೆ  ಮಲ್ಲಮ್ಮನ‌ ಸಂಬಂಧಿಕರು ಅತ್ತರು.

ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಎರಡು ಮೃತದೇಹಗಳನ್ನು ರವಾನೆ ಮಾಡಲಾಗಿತ್ತು. ಹೀಗಾಗಿ ಅಪೋಲೋ ಆಸ್ಪತ್ರೆ ಆವರಣದಲ್ಲಿ ಮೃತ ಸಂಬಂಧಿಕರ ಆಕ್ರಂದನ ಹೆಚ್ಚಾಗಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ