ತುಮಕೂರು ಮೂರು ರೈಲ್ವೆ ಕಾಮಗಾರಿ ಬಗ್ಗೆ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ಹೀಗಿತ್ತು

Sampriya

ಮಂಗಳವಾರ, 27 ಆಗಸ್ಟ್ 2024 (18:38 IST)
Photo Courtesy X
ನವದೆಹಲಿ: ತುಮಕೂರು ಜಿಲ್ಲೆಯಲ್ಲಿ ಮತ್ತೆ ಎರಡು ರಸ್ತೆ ಕೆಳ ಸೇತುವೆ (ಆರ್‌ಯುಬಿ) ಹಾಗೂ ಒಂದು ರಸ್ತೆ ಮೇಲ್ಸೇತುವೆಯನ್ನು (ಆರ್‌ಒಬಿ) ರೈಲ್ವೆ ಇಲಾಖೆ ಮಂಜೂರು ಮಾಡಿದೆ.

 ಬಗ್ಗೆ ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರು ಮಾಹಿತಿ ನೀಡಿ, ಈ ಕಾಮಗಾರಿಗೆ 60ಕೋಟಿ ಇಟ್ಟಿದ್ದು, ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದರು.

₹13.44 ಕೋಟಿ ವೆಚ್ಚದಲ್ಲಿ ಕಲ್ಲಿಪಾಳ್ಯ ರಸ್ತೆಯಲ್ಲಿ ಕೆಳ ಸೇತುವೆ, ₹36.62 ಕೋಟಿ ವೆಚ್ಚದಲ್ಲಿ ಬೆಂಚಗೆರೆ ಗೇಟ್‌ನಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಬಂಡಿಹಳ್ಳಿ ರೋಡ್ ಗೇಟ್‌ನಲ್ಲಿ ₹10 ಕೋಟಿ ವೆಚ್ಚದಲ್ಲಿ  ರಸ್ತೆ ಕೆಳ ಸೇತುವೆ ನಿರ್ಮಿಸಲಾಗುತ್ತದೆ.

ಐದು ಕಡೆಗಳಲ್ಲಿ ₹350 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ಕಾಮಗಾರಿಗಳನ್ನು ರೈಲ್ವೆ ಇಲಾಖೆ ಜುಲೈ 15ರಂದು ಮಂಜೂರು ಮಾಡಿತ್ತು. ಈ ಯೋಜನೆಗಳ ಅನುಷ್ಠಾನಕ್ಕೆ ಭೂ ಸ್ವಾಧೀನಕ್ಕೆ ತಕ್ಷಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ