ಚಂದ್ರಯಾನ-3 ಯಶಸ್ಸಿಗಾಗಿ ಕುಕ್ಕೆಯಲ್ಲಿ ವಿಶೇಷ ಪೂಜೆ

ಮಂಗಳವಾರ, 22 ಆಗಸ್ಟ್ 2023 (09:59 IST)
ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಚಂದ್ರಯಾನ-3 ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಗರಪಂಚಮಿಯಂದು ಶ್ರೀ ಕ್ಷೇತ್ರದಲ್ಲಿ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲೆಂದು ಪ್ರಾರ್ಥಿಸಲಾಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಊರ ಹಿರಿಯರು ನಾಗದೇವರಿಗೆ ಹಾಲೆರೆದು ಮಹಾ ಪೂಜೆ, ಕಾರ್ತಿಕ ಪೂಜೆ ನೆರವೇರಿಸಿದರು.

ಭಾರತ ಚಂದ್ರಯಾನ-3 ಕಾರ್ಯಾಚರಣೆಯ ಕೊನೆ ಹಂತದ ಭಾಗವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಬೇರ್ಪಡಿಸುವ ಕಾರ್ಯ ಗುರುವಾರ ಯಶಸ್ವಿಯಾಗಿ ನಡೆದಿತ್ತು. ಈ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಗೊಳಿಸಿದೆ. ಆಗಸ್ಟ್ 23ರಂದು ಚಂದ್ರಯಾನ ನೌಕೆ ಚಂದ್ರನ ಮೇಲೆ ಇಳಿಯಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ