Waqf Bill: ಕರ್ನಾಟಕದಲ್ಲಿ ವಕ್ಫ್ ಹೊಸ ಕಾಯಿದೆ ಜಾರಿ ಮಾಡಲ್ಲ: ಜಮೀರ್ ಅಹ್ಮದ್
ಮಾಧ್ಯಮಗಳೊಂದಿಗೆ ಮಾತನಾಡಿರುವ ಜಮೀರ್ ಅಹ್ಮದ್ ನಮ್ಮಲ್ಲಿ ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿ ಕಾನೂನು ಜಾರಿ ಮಾಡಲ್ಲ ಎಂದಿದ್ದಾರೆ. ಹೊಸ ಕಾಯಿದೆ ಬಗ್ಗೆ ನಮ್ಮ ವಿರೋಧವಿದೆ. ಈ ಕಾರಣಕ್ಕೆ ಜಾರಿ ಮಾಡಲ್ಲ ಎಂದಿದ್ದಾರೆ.
ಈಗಾಗಲೇ ವಕ್ಫ್ ಕಾಯಿದೆಯನ್ನು ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ ಸೇರಿದಂತೆ ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಜಾರಿಗೆ ತರದೇ ಇರಲು ನಿರ್ಧರಿಸಿದ್ದಾರೆ. ನಮ್ಮಲ್ಲೂ ಹೊಸ ಕಾನೂನು ಜಾರಿಗೆ ತರಲ್ಲ ಎಂದಿದ್ದಾರೆ ಜಮೀರ್.
ಆದರೆ ಸಚಿವ ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಕ್ಫ್ ಹೊಸ ಕಾಯಿದೆ ಕೇಂದ್ರ ಸರ್ಕಾರದ ಕಾನೂನು. ಇದನ್ನು ಎಲ್ಲಾ ರಾಜ್ಯಗಳೂ ಕಡ್ಡಾಯವಾಗಿ ಜಾರಿಗೆ ತರಲೇಬೇಕು. ಇದನ್ನು ಹೊರತು ಬೇರೆ ಆಯ್ಕೆಯಿಲ್ಲ ಎಂದಿದ್ದಾರೆ.