ಅಪ್ರಾಪ್ತರು, SC-ST ಸಮುದಾಯದವರ ಮತಾಂತರ ಮಾಡಿದ್ರೆ 3 -10 ವರ್ಷ ಜೈಲು, ದಂಡ

ಗುರುವಾರ, 23 ಡಿಸೆಂಬರ್ 2021 (21:50 IST)
ಬೆಂಗಳೂರು :- ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತು ಚರ್ಚೆ ನಡೆಯುತ್ತಿದೆ, ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ.
ದೆಹಲಿ ಮಹಾರಾಷ್ಟ್ರದಲ್ಲೇ ಹೆಚ್ಚು ಪ್ರಕರಣ
ಅಪ್ರಾಪ್ತರು, ಎಸ್,ಎಸಿ, ಎಸ್.ಟಿ ಸಮುದಾಯದವರು ಮತಾಂತರ ಮಾಡುವುದಕ್ಕೆ ಶಿಕ್ಷೆ ವಿಧಿಸಲಾಗಿದೆ.
ಬಲವಂತದ ಮತಾಂತರ ಮಾಡಿದರೆ ಶಿಕ್ಷೆಯ ಜೊತೆಗೆ ದಂಡ, ಬಲವಂತದ ಮತಾಂತರ ಮಾಡಿದರೆ 3 ರಿಂದ 10 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ. ಸಾಮೂಹಿಕವಾಗಿ ಮತಾಂತರ ಮಾಡಿದರೆ 3 ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಮತಾಂತರವಾದ ವ್ಯಕ್ತಿ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಮೂಲ ಧರ್ಮದ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾನೆ. ಈ ಬಗ್ಗೆ ಜಿಲ್ಲಾಧಿಕಾರಿಯೇ ದೃಢಪಡಿಸುತ್ತಾರೆ. ಪಡಿಸಿದ ಬಳಿಕ ನಿರ್ದಿಷ್ಟ ಜಾತಿಯ ಬಗ್ಗೆ ಉಲ್ಲೇಖಿಸುತ್ತಾರೆ. ಅದಾದ ಬಳಿಕ ಆ ಜಾತಿಯಲ್ಲಿ ಅವರು ಮುಂದುವರಿಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ