ಡಿಕೆ ಸುರೇಶ್ ವಿರುದ್ಧ ಶಾಸಕ ಅಶ್ವತ್‌ನಾರಾಯಣ ವಾಗ್ದಾಳಿ

geetha

ಗುರುವಾರ, 1 ಫೆಬ್ರವರಿ 2024 (21:09 IST)
ಬೆಂಗಳೂರು-ಇವರ ಅಣ್ಣನೇ ಬೆಂಗಳೂರು ಅಭಿವೃದ್ಧಿ, ಬೆಂಗಳೂರು ಉಸ್ತುವಾರಿ ಮಂತ್ರಿ,ಇವರು ಬೆಂಗಳೂರಿಗೆ ಏನು ಕೊಟ್ಟಿದ್ದಾರೆ ಹೇಳಲಿ,ಬೆಂಗಳೂರು ರಾಜ್ಯದ ಆರ್ಥಿಕತೆ ಸಾಕಷ್ಟು ಕೊಡುಗೆ ಕೊಡ್ತಿದೆ.ಇವರ ಸರ್ಕಾರ ಬೆಂಗಳೂರಿಗೆ ಎಷ್ಟು ಕೊಟ್ಟಿದಾರೆ ಹೇಳಲಿ.ರಾಮ ನಗರಕ್ಕೆ ಹೆಚ್ಚಿನ ಹಣ ತಗೊಂಡ್ ಹೋಗಿದಾರೆರಾಜಕೀಯ ಪ್ರೇರಿತ ಹೇಳಿಕೆ ಕೊಡಬಾರದು ಎಂದು ಡಿಕೆ ಸುರೇಶ್ ಹೇಳಿಕೆಗೆ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.
 
ಡಿಕೆ ಸುರೇಶ್ ಗೆ ತಿಳುವಳಿಕೆಯ ಕೊರತೆ ಇದೆ.ತೆರಿಗೆ ಸಂಗ್ರಹ ಮಾಡ್ತೇವೆ ಅಂತ ಅದೆಲ್ಲ ನಮಗೇ ಸೇರಬೇಕು ಅಂತಲ್ಲ.ಆರ್ಥಿಕ ವಿಕೇಂದ್ರೀಕರಣ ಬಗ್ಗೆ ಸುರೇಶ್ ತಿಳಿದುಕೊಳ್ಳಲಿ.ಜವಾಬ್ದಾರಿ ಸ್ಥಾನದಲ್ಲಿ ಇರೋರು ವಿಚಾರಗಳು ಸರಿಯಾಗಿ ಮಂಡಿಸಬೇಕು.ಜನರನ್ನು ದಾರಿ ತಪ್ಪಿಸುವ ಹೇಳಿಕೆ ಇದು ಅಶ್ವಥ್ ನಾರಾಯಣ ಡಿಕೆ ಸುರೇಶ್ ವಿರುದ್ಧ ಗರಂ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ