ಮೊಟ್ಟೆ ಎಸೆತ ಪ್ರಕರಣ: ಆಸ್ಪತ್ರೆಯಿಂದ ಶಾಸಕ ಮುನಿರತ್ನ ಡಿಸ್ಚಾರ್ಜ್, ಎಫ್ಐಆರ್ ದಾಖಲು

Krishnaveni K

ಗುರುವಾರ, 26 ಡಿಸೆಂಬರ್ 2024 (10:20 IST)
ಬೆಂಗಳೂರು: ಮೊಟ್ಟೆ ಎಸೆತ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆರ್ ಆರ್ ನಗರ ಶಾಸಕ ಮುನಿರತ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಪ್ರಕರಣಕ್ಕೆ ಸಬಂಧಿಸಿದಂತೆ ನಂದಿನಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೊಟ್ಟೆಗೆ ಕೆಮಿಕಲ್ ಮಿಕ್ಸ್ ಮಾಡಿ ಎಸೆಯಲಾಗಿದೆ ಎಂಬ ಅನುಮಾನವಿದೆ. ಈ ಕಾರಣಕ್ಕೆ ಮೊಟ್ಟೆ ಬಿದ್ದಿದ್ದ ಮುನಿರತ್ನ ತಲೆಯ ಭಾಗ ಕೂದಲು ಕರಕಲಾಗಿತ್ತು. ಹೀಗಾಗಿ ಮೊಟ್ಟೆಗೆ ಕೆಮಿಕಲ್ ಮಿಕ್ಸ್ ಆಗಿತ್ತು ಎಂದು ಅನುಮಾನಿಸಲಾಗಿದೆ.

ಘಟನೆ ಬಳಿಕ ಮುನಿರತ್ನರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಘಟನೆ ಬಗ್ಗೆ ಮುನಿರತ್ನ ಕೊಲೆ ಯತ್ನ, ಸಂಚು ಆರೋಪ ಮಾಡಿ ದೂರು ನೀಡಿದ್ದರು. ಹೀಗಾಗಿ ಈಗ ಎಫ್ಐಆರ್ ದಾಖಲಿಸಲಾಗಿದೆ.

ಇಂಜೆಕ್ಷನ್ ಮತ್ತು ಔಷಧಿ ನಿಡಲಾಗಿದೆ. ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಎಲ್ಲಾ ವಿಚಾರ ಹೇಳುವುದಾಗಿ ಮುನಿರತ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ