ಜಮ್ಮು- ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿ ಒಟ್ಟು ಐವರು ಯೋಧರು ಮೃತಪಟ್ಟಿದ್ದಾರೆ.
ಇದರಲ್ಲಿ ಕುಂದಾಪುರದ ಬೀಝಾಡಿಯ ಯೋಧ ಅನೂಪ್ ಪೂಜಾರಿ (31) ಅವರು ಕೂಡಾ ಸಾವನ್ನಪ್ಪಿದ್ದಾರೆ.
13ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಅನೂಪ್‌ಗೆ ಪತ್ನಿ ಹಾಗೂ ಎರಡು ವರ್ಷದ ಹೆಣ್ಣು ಮಗುವಿದೆ. ರಜೆಯಲ್ಲಿ ಊರಿಗೆ ಬಂದಿದ್ದ ಅನೂಪ್ ಅವರು ಡಿ.21ರಂದು ಕೆಲಸಕ್ಕೆ ವಾಪಾಸ್ಸಾಗಿದ್ದರು.
ಇನ್ನೂ ಈ ಅಪಘಾತದಲ್ಲಿ ಕರ್ನಾಟಕದ ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ ತಿರಕಣ್ಣವರ (45), ಮಹಾಲಿಂಗಪುರದ ಮಹೇಶ್ ಮರಿಗೊಂಡ (25) ಅವರು ಸಾವನ್ನಪ್ಪಿದ್ದಾರೆ.