ಮೂರನೇ ಬಾರಿ ವಿಚಾರಣೆಗೆ ಹಾಜರಾದ ಶಾಸಕ ವಿರೂಪಾಕ್ಷಪ್ಪ

ಸೋಮವಾರ, 13 ಮಾರ್ಚ್ 2023 (20:28 IST)
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲೋಕಾಯುಕ್ತ ಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದಿದ್ದ.ಜೈಲು ಪಾಲಾಗಿದ್ದ ಪ್ರಶಾಂತ್ ನನ್ನ ಲೋಕಾಯುಕ್ತ ಅಧಿಕಾರಿಗಳ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.ಮತ್ತೊಂದು ಕಡೆ ವಿರೂಪಾಕ್ಷಪ್ಪ ಕೂಡ ಇಂದು ವಿಚಾರಣೆಗೆ ಹಾಜರಾಗಿದ್ರು.ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಕ್ರೆಸೆಂಟ್ ರಸ್ತೆಯಲ್ಲಿರುವ ತನ್ನ ಕಚೇರಿಯಲ್ಲಿ ಕಮಿಷನ್ ಹಣ ಪಡಿತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದ.ಕಚೇರಿಯಲ್ಲಿ 2 ಕೋಟಿ 2 ಲಕ್ಷ ನಗದು ಹಣ ಪತ್ತೆಯಾಗಿತ್ತು.ಸಂಜಯನಗರ ಮನೆಯಲ್ಲಿ ಶೋಧ ನಡೆಸಿದ ಲೋಕಾಯುಕ್ತಕ್ಕೆ 6 ಕೋಟಿ 10 ಲಕ್ಷ ನಗದು ಸೇರಿದಂತೆ 8 ಕೋಟಿಯಷ್ಟು ಹಣ ಸಿಕ್ಕಿತ್ತು.ಹಾಗಾಗಿ ಇದರ ಮೂಲ‌ ಯಾವುದು ಅನ್ನೋದರ ಬಗ್ಗೆ ಲೋಕಾಯುಕ್ತ ತಂಡ ತನಿಖೆ ನಡೆಸುತ್ತಿದೆ.

ಮನೆ ಮತ್ತು ಕಚೇರಿಯಲ್ಲಿ ಸಿಕ್ಕ ಹಣಕ್ಕೆ ಸಂಬಂಧ ಪಟ್ಟಂತೆ ಶಾಸಕ ವಿರೂಪಾಕ್ಷಪ್ಪನನ್ನ ಲೋಕಾಯುಕ್ತ ಪೊಲೀಸರು ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದಾರೆ.ಇವತ್ತು ಮಧ್ಯಾಹ್ನ 2.20 ಕ್ಕೆ ಸರಿಯಾಗಿ ಮೂರನೇ ಬಾರಿಗೆ ವಿಚಾರಣೆಗೆ ಹಾಜರಾಗಿದ್ದು ಹಲವು ಪ್ರಶ್ನೆಗಳನ್ನು ಲೋಕಾಯುಕ್ತ ಪೊಲೀಸರು ಕೇಳಿದೆ.ಇದಕ್ಕೆ ಉತ್ತರವನ್ನು ಮಾಡಾಳ್ ವಿರೂಪಾಕ್ಷಪ್ಪ ಕೊಟ್ಟಿದ್ದಾರೆ.ಇದು ಒಂದು ಕಡೆ ಆದರೆ ಟ್ರ್ಯಾಪ್ ನ ಬಳಿಕ ಪ್ರಶಾಂತ್ ನನ್ನ ಲೋಕಾಯುಕ್ತ ಪೊಲೀಸರು ಜೈಲಿಗೆ ಕಳಿಸಿದ್ರು.ಇದುವರೆಗೂ ಆತನ ಸಿಕ್ಕ ಹಣದ ಮೂಲದ ಬಗ್ಗೆ ಆತನಿಂದ ಉತ್ತರ ಪಡೆದಿರಲಿಲ್ಲ ಹಾಗಾಗಿ.ಇವತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಲೋಕಾಯುಕ್ತ ಪೊಲೀಸರು ಪ್ರಶಾಂತ್ ಹಾಗೂ ಅಕೌಂಟೆಂಟ್ ಸುರೇಂದ್ರನನ್ನ  ಏಳು ದಿನ ಕಸ್ಟಡಿಗೆ ಕೇಳಿತ್ತು .ಆದರೆ ಕೋರ್ಟ್ ಮಾರ್ಚ್ 16 ವರೆಗೆ ಕಸ್ಟಡಿಗೆ ‌ನೀಡಿದ್ದು.ಲೋಕಾಯುಕ್ತ ಕಚೇರಿಗೆ ತಂದು ವಿಚಾರಣೆ ಮಾಡಲಾಯ್ತು.ಸದ್ಯ ಅಪ್ಪ ಮತ್ತೆ ಮಗ ಇಬ್ಬರನ್ನು ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ಸಿಕ್ಕ ಹಣದ ಬಗ್ಗೆ ಲೆಕ್ಕ ಕೇಳ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ