ಮೋದಿ ಭೇಟಿ ರದ್ದು ಮರಗಳ ಮಾರಣಹೋಮ ರದ್ದು

ಶುಕ್ರವಾರ, 4 ಮಾರ್ಚ್ 2022 (20:21 IST)
ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್‌ನಲ್ಲಿ ಬೆಂಗಳೂರು ಭೇಟಿ ರದ್ದುಗೊಳಿಸಿದ್ದರಿಂದ ನಾಲ್ಕು ಮರಗಳ ಜೀವ ಉಳಿಯಿತು ಎಂದು ಹೇಳಲಾಗಿದೆ.
 
ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಲಾ ಸ್ಕೂಲ್ ಅಫ್ ಇಂಡಿಯಾದ ಕ್ಯಾಂಪಸ್‌ನಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿಯಬೇಕಿತ್ತು
.ಒಂದೊಮ್ಮೆ ಬಂದಿದ್ದರೆ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ಗಾಗಿ ನಾಲ್ಕು ಯುಕಲಿಪ್ಟಸ್ ಮರಗಳನ್ನು ಕಡಿಯಬೇಕಾಗುತ್ತಿತ್ತು ಎನ್ನಲಾಗಿದೆ.
 
ಈ ಕುರಿತು 'ಡೆಕ್ಕನ್ ಹೆರಾಲ್ಡ್‌ 'ವರದಿ ಮಾಡಿದೆ, ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುವ ವಾರಗಳ ಮೊದಲು 2021ರ ನವೆಂಬರ್‌ನಲ್ಲಿ ನಾಲ್ಕು ಮರಗಳನ್ನು ಕಡಿಯಲು ಆದೇಶ ದೊರೆತಿತ್ತು.
 
ಅವರು ಡಿಸೆಂಬರ್ 6 ರಂದು ಡಾ. ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹೊಸ ಕಟ್ಟಡಕ್ಕೆ ಬರುವವರಿದ್ದರು.
 
ಆ ಜಾಗದಲ್ಲಿದ್ದ ಯುಕಲಿಪ್ಟಸ್ ಮರಗಳನ್ನು ಕಡಿಯದಿದ್ದರೆ ಹೆಲಿಕಾಪ್ಟರ್ ಲ್ಯಾಂಡಿಂಗ್ ಕಷ್ಟವಾಗುತ್ತದೆ ಎಂದು ಹೇಳಲಾಗಿತ್ತು. ಮರ ಕಡಿದ ನಂತರ ದಿಣ್ಣೆಗಳನ್ನು ಕಗ್ಗಲಿಪುರ ಪ್ರಾದೇಶಿಕ ಅರಣ್ಯ ಕಚೇರಿಗೆ ಸ್ಥಳಾಂತರಿಸಬೇಕಿತ್ತು.
 
ಮೋದಿ ಭೇಟಿ ಹಿನ್ನೆಲೆ, ಜ್ಞಾನಭಾರತಿ ಸುತ್ತಮುತ್ತ ಹಾಳಾಗಿದ್ದ ರಸ್ತೆಯನ್ನು ಸರಿ ಮಾಡಲು ಬಿಬಿಎಂಪಿಯು 1.5 ಕೋಟಿ ಕಾಮಗಾರಿಯನ್ನು ನಡೆಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ