ಮೋದಿ ‘ಮಹಾನ್ ಫೇಕ್ ಮಹಾರಾಜ’ ಅವಹೇಳನಕಾರಿ ಹೇಳಿಕೆ ನೀಡಿದ ಕೈ ಮುಖಂಡ
ಮಂಗಳವಾರ, 14 ಮೇ 2019 (16:33 IST)
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ಮುಖಂಡರೊಬ್ಬರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ಮೇ 23 ರ ನಂತರ ನರೇಂದ್ರ ಮೋದಿಗೆ "ಮಹಾನ್ ಫೇಕ್ ಮಹಾರಾಜ" ಅಂತಾ ಹೆಸರು ಬರಲಿದೆ ಎಂದು ಬಿ.ಕೆ. ಹರಿಪ್ರಸಾದ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಮೋದಿ ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿ ಸಂದರ್ಭದಲ್ಲಿ ಮೋದಿ ಮೋಡದ ವಿಜ್ಞಾನಿ ಆಗಿದ್ದರು. ಪ್ಲ್ಯಾಸ್ಟಿಕ್ ಸರ್ಜರಿ ವಿಜ್ಞಾನಿ ಕೂಡ ಆಗಿದ್ದಾರೆ. ಅವರ ಗ್ರಾಜ್ಯುವೆಟ್ ಫೇಕ್, ಅವರ ಕೊಟ್ಟ ಕಾರ್ಯಕ್ರಮಗಳು ಕೂಡ ಫೇಕ್ ಎಂದ್ರು.
ಮೊದಲು ಪ್ರಧಾನ ಸೇವಕ ಅಂದ್ರು, ಆ ಬಳಿಕ ಚೌಕಿದಾರ ಅಂದ್ರು. ಆದ್ರೆ ಮೇ 23 ರ ಬಳಿಕ ಅವರಿಗೆ ಬೇರೆಯದೇ ಹೆಸರೇ ಬರಲಿದೆ ಅಂತ ಹೇಳಿದ್ರು.
ಮೇ 23 ರ ಬಳಿಕ "ಮಹಾನ ಫೇಕ್ ಮಹಾರಾಜ್" ಅಂತಾ ಮೋದಿಗೆ ಹೊಸ ಹೆಸರು ಬರುತ್ತದೆ ಎಂದು ಟೀಕೆ ಮಾಡಿದ್ರು.
ಐಟಿ ಮತ್ತು ಇಡಿಯನ್ನು ರಾಜಕೀಯ ದಾಳಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಐಟಿ ಮತ್ತು ಇಡಿಯನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಜನರನ್ನು ಭಯ ಬೀಳಿಸುವುದಕ್ಕಾಗಿ ದಾಳಿ ನಡೆಯುತ್ತಿದೆ ಎಂದರು.