ವಿಶ್ವನಾಥ್, ಸಿದ್ದರಾಮಯ್ಯರ ಕಲಹ 23 ರ ನಂತ್ರ ಸರಿಹೋಗುತ್ತಂತೆ!
ಮಂಗಳವಾರ, 14 ಮೇ 2019 (15:42 IST)
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ 35 ವರ್ಷದ ಸ್ನೇಹಿತರು. ಈಗ ಇಬ್ಬರ ನಡುವೆ ನಡೆಯುತ್ತಿರುವುದು ತೋರಿಕೆಯ ಕಲಹ ಮಾತ್ರ.
ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎಲ್ಲವೂ ಸರಿ ಹೋಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಪ್ರಧಾನಿ ಆಗುವುದಿಲ್ಲ. ರಾಜ್ಯದಲ್ಲಿ ಮಾತ್ರ ಮೈತ್ರಿ ಸರ್ಕಾರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಹೀಗಂತ ಎಂಎಲ್ ಸಿ ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಒಳ್ಳೆಯವರೇ ಆದರೆ ಅವರು ಇರುವ ಪಕ್ಷ ಮಾತ್ರ ಸರಿ ಇಲ್ಲ. ಮೇ 23ರಂದು ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಯಡಿಯೂರಪ್ಪ ಅವರೇ ಪಕ್ಷ ಬಿಟ್ಟು ಹೊರ ಬರುತ್ತಾರೆ. ಅಧಿಕಾರವಿಲ್ಲದ ಪಕ್ಷದಲ್ಲಿ ಯಾರೂ ಉಳಿಯುವುದಿಲ್ಲ. ಬಿಜೆಪಿ ನಿಂತಿರುವುದೇ ಯಡಿಯೂರಪ್ಪರ ಬಲದ ಮೇಲೆ.
ಆದರೆ ವೀರಶೈವ ಲಿಂಗಾಯಿತರಿಗೆ ಬಿಜೆಪಿ ಅನ್ಯಾಯ ಮಾಡಿದೆ. 8 ಎಂಪಿಗಳಿದ್ದರೂ ಒಬ್ಬರಿಗೂ ಮಂತ್ರಿ ಮಾಡಲಿಲ್ಲ. ಈಗ ಬಿಜೆಪಿಯಲ್ಲೂ ಒಂದು ಬಣ ಯಡಿಯೂರಪ್ಪ ವಿರುದ್ಧ ಕೆಲಸ ಮಾಡುತ್ತಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದೆ. ಹಾಗಾಗಿಯೇ ಇನ್ನು ಬಿಜೆಪಿಗೆ ಭವಿಷ್ಯವಿಲ್ಲ ಎಂದರು.