ಮೋದಿ ತೋರಿಸಿ ಮತ ಕೇಳ್ತಿದ್ದಾರೆ : ಸಿದ್ದರಾಮಯ್ಯ ಕಿಡಿ

ಶುಕ್ರವಾರ, 20 ಜನವರಿ 2023 (09:01 IST)
ಹಾವೇರಿ : ಲಂಬಾಣಿಗರಿಗೆ ಹಕ್ಕು ಪತ್ರ ಕೊಡಲು ಪ್ರಧಾನಿ ಬಂದಿದ್ದಾರೆ. ಲಂಬಾಣಿಗರೇ ಹಕ್ಕು ಪತ್ರ ಕೊಟ್ಟಿದ್ದು ಯಾರು..? ಕಾಗೋಡು ತಿಮ್ಮಪ್ಪ ಕಂದಾಯ ಮಂತ್ರಿ, ಕೋಳಿವಾಡರು ಸ್ಪೀಕರ್ ಆಗಿದ್ದರು.
 
ಆಗ ಲಂಬಾಣಿ ತಾಂಡಾಗಳಿಗೆ ನ್ಯಾಯ ಕೊಟ್ಟಿದ್ದೆವು. ಗೊಲ್ಲರಹಟ್ಟಿ, ತಾಂಡಾಗಳು, ನಾಯಕರ ಹಟ್ಟಿಗಳಿಗೆ ಕಂದಾಯ ಗ್ರಾಮ ಮಾಡಿದ್ದೆವು. ಈಗ ಲಂಬಾಣಿ ಜನರ ವೋಟಿಗಾಗಿ ಬಂದಿದ್ದಾರೆ ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ ಮುನ್ಸಿಪಲ್ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವಾಲಾಲ್ ಲಂಬಾಣಿ ಜನರ ಆರಾಧ್ಯ ದೈವ. ಅವರ ಜಯಂತಿ ಮಾಡಿದ್ದು ನಮ್ಮ ಸರ್ಕಾರ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ