ಬಿಜೆಪಿ ನಾಯಕರಿಗೆ ಮೋದಿ ಖಡಕ್ ಎಚ್ಚರಿಕೆ
ಮೋದಿಯ ಮೇಲೆ ಅತಿಯಾದ ಅವಲಂಬನೆ ಆಗಿ ರಾಜ್ಯದ ನಾಯಕರ ಶ್ರಮ ಕಡಿಮೆ ಆಗಿದೆಯಾ? ಎಂಬ ಪ್ರಶ್ನೆಗಳೆದ್ದಿವೆ. ಹಾಗಾದ್ರೆ ಬಿಜೆಪಿ ಹೈಕಮಾಂಡ್ಗೆ ತಲುಪಿದ ಆ ವರದಿಯಿಂದಲೇ ಮೋದಿ ಮಹಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಅಂದಹಾಗೆ 2024ರ ಚುನಾವಣೆಗೆ ಇನ್ನೂ 400 ದಿನ ಬಾಕಿ ಇದೆ. ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದಲ್ಲೇ ಪ್ರಧಾನಿ ನರೇಂದ್ರ ಮೋದಿ ಕಹಳೆ ಊದಿದ್ದಾರೆ. ಮೋದಿಯಿಂದ ಎಚ್ಚರಿಕೆಯ ಖಡಕ್ ಸಂದೇಶ ರವಾನೆಯಾಗಿದೆ ಎನ್ನಲಾಗಿದ್ದು, ಮೋದಿ ಭ್ರಮೆ ಬೇಡ, ಮೋದಿ ಹೆಸರೇಳಿಕೊಂಡು ಕೂರಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.