ಡಿಸೆಂಬರ್ 6 ರಂದು ಬೆಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿರುವ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡವನ್ನು ಮೋದಿ ಉದ್ಘಾಟಿಸಲಿರುವ ಕಾರಣ ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಲಾಗಿದೆ. ಇನ್ನು, ಬೆಂಗಳೂರಿನ ರಸ್ತೆಗಳ ಬಗ್ಗೆ ಆಮ್ ಆದ್ಮಿ ಪಕ್ಷದ ಅಶೋಕ್ ಮೃತ್ಯುಂಜಯ ಮಾತನಾಡಿ, ಮಹದೇವಪುರದ ಬಹುತೇಕ ಎಲ್ಲಾ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಟೀಕಿಸಿದ್ದಾರೆ.ನಾವು ಕಾಣುವುದು ಮಣ್ಣಿನಿಂದ ಆವೃತವಾಗಿರುವ ಅಥವಾ ಗುಂಡಿಗಳಿಂದ ತುಂಬಿದ ರಸ್ತೆ. ರಸ್ತೆಗಳು ಧೂಳಿನಿಂದ ಕೂಡಿರುವುದರಿಂದ ದ್ವಿಚಕ್ರ ವಾಹನ ಸವಾರಿ ಇನ್ನಷ್ಟು ಹದಗೆಡುತ್ತಿದೆ' ಎಂದು ಹೇಳಿದರು. "ವಿಐಪಿಗಳು ಮಾತ್ರ ಸುರಕ್ಷಿತವಾಗಿ ಸವಾರಿ ಮಾಡಬೇಕೆಂದು ಬಿಬಿಎಂಪಿ ಬಯಸುತ್ತಿರುವಂತೆ ತೋರುತ್ತಿದೆ" ಎಂದೂ ಆರೋಪಿಸಿದರು. ಕೆಲವು ಟ್ವಿಟ್ಟರ್ ಬಳಕೆದಾರರು ತಮ್ಮ ಪ್ರದೇಶಗಳಿಗೆ ಭೇಟಿ ನೀಡುವಂತೆ ಪ್ರಧಾನಿಯನ್ನು ಆಹ್ವಾನಿಸಿದರು.
"ಬೆಂಗಳೂರು ರಸ್ತೆಗಳು ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿವೆ. ರಸ್ತೆಯ ಮೂಲಕ ನಿಮ್ಮ ನಿಗದಿತ ಪ್ರಯಾಣ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೊಸ ರೂಪ ನೀಡಿದೆ. ಈ ಹಿನ್ನೆಲೆ, ಇನ್ನು ಕೆಲವು ಪ್ರದೇಶಗಳಿಗೆ ರಸ್ತೆಯ ಮೂಲಕ ಪ್ರಯಾಣಿಸಲು ವಿನಂತಿಸುತ್ತೇನೆ. ಇದರಿಂದ ನಗರವು ಉತ್ತಮ ರಸ್ತೆಗಳನ್ನು ಪಡೆಯುತ್ತದೆ" ಎಂದು ದೀಪಕ್ ಕೃಷ್ಣಪ್ಪ ಎಂಬುವವರು ಟ್ವೀಟ್ ಮಾಡಿದ್ದಾರೆ.