ಪರಪ್ಪನ ಅಗ್ರಹಾರದಲ್ಲಿ ನಲಪಾಡ್ ಗೆ ಬೇಲ್ ಇಲ್ಲ.. ನಿದಿರೆಯೂ ಇಲ್ಲ!
ನಲಪಾಡ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನಿನ್ನೆ ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನು ಸಿಗದ ಹತಾಶೆಯಲ್ಲಿ ನಿನ್ನೆಯೇ ಆತ ಜೈಲಾಧಿಕಾರಿಗಳೊಂದಿಗೆ ರಂಪಾಟ ಮಾಡಿದ್ದ.
ನಂತರ ರಾತ್ರಿಯೂ ನಿದ್ರೆ ಮಾಡದೇ ಎದ್ದೇ ಕುಳಿತಿದ್ದ ನಲಪಾಡ್ ಬೆಳಗಿನ ಜಾವ 6 ಗಂಟೆಗೆ ಸ್ವಲ್ಪ ಹೊತ್ತು ಮಲಗಿಕೊಂಡ ಎನ್ನಲಾಗಿದೆ. ವಿದ್ವತ್ ಇದೀಗ ಚೇತರಿಸಿಕೊಳ್ಳುತ್ತಿರುವ ಕಾರಣ ನಿನ್ನೆ ಜಾಮೀನು ಸಿಕ್ಕೇ ಸಿಗುತ್ತದೆಂಬ ಅತಿಯಾದ ನಂಬಿಕೆ ನಲಪಾಡ್ ಮತ್ತು ಇತರ ಆರೋಪಿಗಳಿತ್ತು.