ನಲಪಾಡ್ ಗೆ ಜಾಮೀನು ನೀಡಿದರೂ ಷರತ್ತು ವಿಧಿಸಿದ ಹೈಕೋರ್ಟ್

ಗುರುವಾರ, 14 ಜೂನ್ 2018 (10:53 IST)
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ಜಾಮೀನು ನೀಡಿದ ಹೈಕೋರ್ಟ್ ಕೆಲವು ಷರತ್ತು ವಿಧಿಸಿದೆ.

ಫರ್ಜಿ ಕೆಫೆಯಲ್ಲಿ ಮೂರು ತಿಂಗಳ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದರು. ಇದೀಗ ಜಾಮೀನು ಮಂಜೂರಾದರೂ ಕೋರ್ಟ್ ಕೆಲವು ಷರತ್ತು ವಿಧಿಸಿದ್ದು, ಅದನ್ನು ಪಾಲಿಸಲೇಬೇಕಿದೆ.

ಆರೋಪಿ ಪ್ರಭಾವಿ ವ್ಯಕ್ತಿಯಾದ್ದರಿಂದ ಸಾಕ್ಷ್ಯ ನಾಶ ಮಾಡಬಹುದೆಂಬ ಕಾರಣಕ್ಕೆ ಇದುವರೆಗೆ ಜಾಮೀನು ನಿರಾಕರಣೆಯಾಗುತ್ತಲೇ ಇತ್ತು. ಇದೀಗ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ ಸಾಕ್ಷ್ಯ ನಾಶ ಮಾಡಲು ಯತ್ನಿಸದಂತೆ ಎಚ್ಚರಿಕೆಯ ಷರತ್ತು ವಿಧಿಸಿದೆ. ಜತೆಗೆ 2 ಲಕ್ಷ ರೂ.ಗಳ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಲು ಸೂಚಿಸಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ