ಸೋಮವಾರದಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ

ಭಾನುವಾರ, 11 ಸೆಪ್ಟಂಬರ್ 2022 (14:27 IST)
ಹತ್ತು ದಿನಗಳ ಕಾಲ ನೆಡೆಯುವ ಅಧಿವೇಶನ ಪಿಎಸ್‌ಐ ನೇಮಕಾತಿ ಹಗರಣ, 40 ಪರ್ಸೆಂಟ್‌ ಕಮಿಷನ್‌, ಮಳೆಯಿಂದ ಬೆಂಗಳೂರು ಮುಳುಗಿದ ವಿಚಾರಗಳು ಪ್ರತಿಧ್ವನಿಸುವ ಸಾಧ್ಯತೆಯಿದೆ.
 
ಆಡಳಿತ ಪಕ್ಷದ ವೈಫ‌ಲ್ಯ ಪ್ರಸ್ತಾಪಿಸಿ
ಬಗ್ಗೆ ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ.
 
ರಾಜ್ಯದಲ್ಲಿ ಕಳೆದ 16 ವರ್ಷಗಳಲ್ಲಿ 11 ವರ್ಷ ಬಿಜೆಪಿಯೇ ಅಧಿಕಾರ ನಡೆಸಿದ್ದು, ಎಲ್ಲ ಕಾಲದ ಹಗರಣಗಳೂ ಸೇರಿಸಿ ತನಿಖೆ ನಡೆಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಹೀಗಾಗಿ, ಅಧಿವೇಶನದಲ್ಲಿ ಕಾಂಗ್ರೆಸ್‌ – ಬಿಜೆಪಿ ನಡುವೆ ಜಟಾಪಟಿ ನಡೆಯುವ ಸಾಧ್ಯತೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ