ಹೆಚ್ಚಾಯ್ತು ಕೊರೊನಾ : ರ್ಯಾಂಡಮ್ ಸ್ಯಾಂಪಲ್ಸ್ ಶುರು

ಗುರುವಾರ, 14 ಮೇ 2020 (17:31 IST)
ಹೆಚ್ಚು ಕೊರೋನಾ ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ವಾರ್ಡುಗಳಲ್ಲಿ ಪ್ರತಿ ಮನೆ-ಮನೆ ಆರೋಗ್ಯ ತಪಾಸಣೆ ನಡೆಸಿ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳಿಂದ ರ್ಯಾಂಡಮ್ ಸ್ಯಾಂಪಲ್ಸ್ ಸಂಗ್ರಹಿಸಲಾಗುತ್ತದೆ.

ಕಲಬುರಗಿ ನಗರದ ಮೋಮಿನಪುರ ಹಾಗೂ ಸುತ್ತಮುತ್ತಲಿನ ವಾರ್ಡಗಳಲ್ಲಿ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳಿಂದ ರ್ಯಾಂಡಮ್ ಸ್ಯಾಂಪಲ್ಸ್ ಸಂಗ್ರಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.

ಕಲಬುರಗಿ ನಗರದ ವಾರ್ಡ್ ಸಂಖ್ಯೆ 23, 24 ಮತ್ತು 25ರಲ್ಲಿ ರ್ಯಾಂಡಮ್ ತಪಾಸಣೆ ನಡೆಯಲಿದೆ. ಹೈ ರಿಸ್ಕ್ ಇದ್ದವರು, ಇನ್ನಿತರ ಕಾಯಿಲೆಗೆ ಒಳಗಾದವರು ಮತ್ತು 60 ವರ್ಷ ದಾಟಿದವರ ಸ್ಯಾಂಪಲ್ಸ್ ಪಡೆಯಲಾಗುತ್ತದೆ. ಹೀಗಾಗಿ ಮನೆಗೆ ಬರುವ ಸ್ಯಂಪಲ್ಸ್ ಸಂಗ್ರಹ ತಂಡಕ್ಕೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಡಿ.ಸಿ. ತಿಳಿಸಿದ್ದಾರೆ.  

ತದನಂತರ ಜಿಲ್ಲೆಯ ಇತರೆ ಕಂಟೇನ್‍ಮೆಂಟ್ ಝೋನ್ ಪ್ರದೇಶದಲ್ಲಿಯೂ ಸಹ ಇದೇ ರೀತಿಯ ರ್ಯಾಂಡಮ್ ಸ್ಯಾಂಪಲ್ ಕಲೆಕ್ಷನ್ ಪಡೆಯಲಾಗುವುದು ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ