ಒಂದು ವರ್ಷದಿಂದ ಮೈತ್ರಿ ಸರ್ಕಾರದ ರಾಜ್ಯದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗಿತ್ತು. ಆಡಳಿತ ಯಂತ್ರ ಕುಸಿದು ಹೋಗಿತ್ತು.
ಐದಾರು ಜಿಲ್ಲೆಗೆ ಸರ್ಕಾರ ಇತ್ತು. ಹೀಗಂತ ಬಿಜೆಪಿ ನಾಯಕ ಟೀಕೆ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕವನ್ನು ಸಿಎಂ ನಿರ್ಲಕ್ಷ್ಯ ಮಾಡಿದ್ರು.
ಬಹಳಷ್ಟು ಜನ ಶಾಸಕರು ಬೇಸತ್ತು ರಾಜೀನಾಮೆ ಕೊಟ್ಟಿದ್ದಾರೆ. ಅಸಮಧಾನಗೊಂಡ ಶಾಸಕರು ಜಾಸ್ತಿ ಆಗುತ್ತಾರೆ. ಸ್ವಯಂ ಪ್ರೇರಣೆಯಿಂದ ರಾಜಿನಾಮೆ ಕೊಡುವಾಗ ಸ್ಪೀಕರ್ ತೆಗೆದುಕೊಳ್ಳಬೇಕು. ಸ್ಪೀಕರ್ ಜವಾಬ್ದಾರಿ ಸ್ಥಾನದಲ್ಲಿದ್ದಾರೆ.
ಶಾಸಕರು ರಾಜೀನಾಮೆ ಕೊಡುವಾಗ ಅವರು ಅಲ್ಲಿರಬೇಕು. ನನ್ನ ಅಪಾಯಿಂಟ್ ಮೆಂಟ್ ತಗೋಬೇಕು ಅನ್ನೋದು ಸರಿಯಲ್ಲ.
ಅವರ ಮನೆಯಲ್ಲಿ ಆದರೂ ರಾಜಿನಾಮೆ ತೆಗೆದುಕೊಳ್ಳಬೇಕು ಎಂದರು.
ಇನ್ನು ಶಾಸಕರ ರಾಜೀನಾಮೆ ಪತ್ರ ಹರಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದು, ಡಿಕೆ ಶಿವಕುಮಾರ್ ಮೊದಲಿನಿಂದ ಈ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ. ಅವರ ಮನೆ ಮೇಲೆ ಐಟಿ ರೇಡ್ ಆದಾಗಲೂ ಕಾಗದ ಪತ್ರ ಹರಿದು ಹಾಕಿದ್ದಾರೆ. ಕಾಲ ಚಕ್ರದಲ್ಲಿ ಈಗ ಬಿಜೆಪಿ ಮೇಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಶ್ರೀಮಂತರು ಆರಾಮಾಗಿರ್ತಾರೆ ಎಂದರು.
ಸ್ಪೀಕರ್ ಎಲ್ಲರಿಗೂ ಬೇಕಾದ ಮನುಷ್ಯ ಆಗಿರಬೇಕು. ವಿರೋಧ ಪಕ್ಷಕ್ಕೆ ಎಷ್ಟು ಅವಕಾಶ ಮಾಡಿಕೊಡ್ತಾರೋ ಅಷ್ಟೇ ಅವಕಾಶ ಮಾಡಿಕೊಡಬೇಕು. ಸ್ಪೀಕರ್ ಅಲ್ಲಿಲ್ಲ, ಇಲ್ಲಿಲ್ಲ ಎನ್ನುವ ಕುಂಟು ನೆಪ ಹೇಳಬಾರದು. ಸ್ಪೀಕರ್ ಸ್ಥಾನದ ಬಗ್ಗೆ ನಮಗೆ ಗೌರವ ಇದೆ. ಕಾಲಾವಕಾಶ ತೆಗೆದುಕೊಳ್ಳುವುದರಲ್ಲಿ ಅರ್ಥ ಇಲ್ಲ. ಟೈಂ ಮುಗಿದು ಹೋಗಿದೆ. ಸಿಎಂ ರಾಜಿನಾಮೆ ಕೊಡಬೇಕು ಎಂದರು.