ಜೆಡಿಎಸ್ – ಕಾಂಗ್ರೆಸ್ ನ ಶಾಸಕರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಮೈತ್ರಿ ಸರಕಾರದ ಸಂಖ್ಯಾಬಲ ಕುಸಿತಗೊಂಡಿದೆ. ಈ ನಡುವೆ ಸರಕಾರ ರಚನೆಗ ಬಿಜೆಪಿ ದಾಪುಗಾಲು ಇಡುತ್ತಿದೆ.
ದೋಸ್ತಿ ಪಕ್ಷಗಳು ಅವರಾಗೇ ಕಚ್ಚಾಡಿಕೊಂಡೆ ಸರಕಾರ ಪತನವಾಗುತ್ತೆ. ನಾವೇನು ಸನ್ಯಾಸಿಗಳಲ್ಲ ಅಂತ ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಹೇಳಿಕೆ ನೀಡಿದ್ರು. ಈಗ ಅದೇ ಮಾತನ್ನು ನಿಜ ಮಾಡುವಂತೆ ರಾಜ್ಯದ ಅಧಿಕಾರ ಚುಕ್ಕಾಣೆ ಹಿಡಿಯಲು ಬಿಜೆಪಿ ತೆರೆಮರೆಯಲ್ಲಿ ತೀವ್ರ ಕಸರತ್ತು ಮುಂದುವರಿಸಿದೆ.
ಸಿದ್ದರಾಮಯ್ಯ ವಿರುದ್ಧ ಶಾಸಕ ಹೆಚ್.ವಿಶ್ವನಾಥ್ ಆರೋಪಗಳ ಸುರಿಮಳೆಗೈದಿದ್ದಾರೆ. ಈ ನಡುವೆ ಸಿಎಂ ವಿರುದ್ಧ ಹಾಲಿ ಸಚಿವರೊಬ್ಬರೂ ತೆರೆಹಿಂದೆ ರಾಜೀನಾಮೆ ಕೊಡಿಸೋಕೆ ಕೈ ಜೋಡಿಸಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಈಗ ಮೈತ್ರಿ ಪಕ್ಷಗಳ ಶಾಸಕರು ರಾಜೀನಾಮೆ ನೀಡಿರೋದ್ರಿಂದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಅಲ್ಪ ಸಂಖ್ಯಾಬಲಕ್ಕೆ ಕುಸಿತ ಕಂಡಿದೆ.
ದೋಸ್ತಿ ಪಕ್ಷಗಳು 105 ಹಾಗೂ ಬಿಜೆಪಿ 105 ಸಂಖ್ಯಾಬಲ ಹೊಂದಿವೆ. ಓರ್ವ ಬಿಎಸ್ಪಿ ಶಾಸಕ ಹಾಗೂ ಇಬ್ಬರು ಪಕ್ಷೇತರ ಶಾಸಕರಿದ್ದಾರೆ.
ಪಕ್ಷೇತರ ಅಥವಾ ಬಿಎಸ್ಪಿ ಶಾಸಕರನ್ನು ಸೆಳೆದು ಬಿಜೆಪಿ ಸರಕಾರ ರಚನೆ ಮಾಡೋಕೆ ಮುಂದಾಗುತ್ತೆ ಎನ್ನೋ ಲೆಕ್ಕಾಚಾರ ಕೇಳಿಬರಲಾರಂಭಿಸಿದೆ.