ಸಂಘಟನೆಗಳಿಂದ ಅಧಿಕ ಸೈಬರ್ ವಂಚನೆ..!

ಬುಧವಾರ, 1 ಡಿಸೆಂಬರ್ 2021 (12:23 IST)
ಮಂಗಳೂರು : ದೇಶಾದ್ಯಂತ ಡಿಜಿಟಲ್ ಇಂಡಿಯಾ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದ್ದು, ಈ ಬಗ್ಗೆ ದೊಡ್ಡ ಮಟ್ಟದ ಪ್ರಚಾರವೇ ನಡೆಯುತ್ತಿದೆ.
ಆದರೆ ಇದೇ ತಂತ್ರಜ್ಞಾನವನ್ನು ವಿದ್ರೋಹಿ ಸಂಘಟನೆಗಳು ದುರ್ಬಳಕೆ ಮಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದ್ದು, ಪ್ರತಿನಿತ್ಯ ಕೋಟ್ಯಂತರ ರೂ. ವಂಚಿಸಲಾಗುತ್ತಿದೆ.
ಬ್ಯಾಂಕ್ ಇನ್ನಿತರ ಹಣಕಾಸಿನ ವ್ಯವಹಾರ ಈಗ ಆನ್ಲೈನ್ನಲ್ಲೇ ನಡೆಯುತ್ತಿವೆ. ಕಳೆದೆರಡು ವರ್ಷಗಳಿಂದ ಶೇ. 50 ರಷ್ಟು ಆನ್ಲೈನ್ ವ್ಯವಹಾರ ವೃದ್ಧಿಯಾಗಿದ್ದು, ದಿನದ 24 ಗಂಟೆಯೂ ವ್ಯವಹಾರ ಸುಲಲಿತವಾಗಿ ನಡೆಯುತ್ತಿದೆ.
ಆದರೆ ಡಿಜಿಟಲ್ ಇಂಡಿಯಾ ಬೆಳೆದಷ್ಟೇ ವೇಗದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರ ಹಿಂದೆ ನಕ್ಸಲ್ ಸೇರಿದಂತೆ ವಿದ್ರೋಹಿ ಸಂಘಟನೆಗಳು ಭಾಗಿಯಾಗಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ನಿಗಾ ವಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ