ತಾಯಿಗೆ ಐಟಿ ನೋಟಿಸ್ ನಿಂದ ಆತಂಕ ಇಲ್ಲ : ಹೆಚ್ಡಿಕೆ
ವಿಧಾನಸೌಧದ ಬಳಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಹೆಚ್ಡಿಕೆ, ನೋಟಿಸ್ ನೀಡಿರುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಆತಂಕಪಡುವ ಅಗತ್ಯವೂ ಇಲ್ಲ ಎಂದರು.
ನೋಟಿಸ್ ಕೊಟ್ಟಿದ್ದಾರೆ. ಅದಕ್ಕೆ ಏನು ಉತ್ತರ ಕೊಡಬೇಕೋ ಕೊಟ್ಟರಾಯಿತು. ಆದಾಯ ತೆರಿಗೆ ಬಗ್ಗೆ ಕಾನೂನಾತ್ಮಕವಾಗಿ ಆಸ್ತಿ ವಿಚಾರವಾಗಿ ಕೇಳಿರುತ್ತಾರೆ.
ಆ ವಿವರಗಳನ್ನು ಸಲ್ಲಿಕೆ ಮಾಡಿದರೆ ಆಯಿತು. ನನ್ನ ಸಹೋದರ ರೇವಣ್ಣ ಅವರಿಗೂ ಇದನ್ನೇ ಹೇಳಿದ್ದೇನೆ. ಇದನ್ನು ನಾವು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.