ಜಿಎಸ್‍ಟಿ ಮೊತ್ತ ನೋಡಿ ಶಾಕ್!

ಬುಧವಾರ, 12 ಜನವರಿ 2022 (06:05 IST)
ತಿರುವನಂತಪುರಂ : ಪಿಂಚಣಿ ಹಣದಲ್ಲಿ ಬದುಕುತ್ತಿದ್ದ ಹಿರಿಯ ವೃದ್ಧ ದಂಪತಿಗೆ ಲಕ್ಷಗಟ್ಟಲೇ ಮೊತ್ತದ ಹಣವನ್ನು ಕಟ್ಟುವಂತೆ ಜಿಎಸ್ಟಿ ನೋಟಿಸ್ ಬಂದಿದೆ.

ಕೇರಳದ ಪೆರುಂಬವುರ್ನ ವೃದ್ಧ ದಂಪತಿಗೆ 5,97,439 ಲಕ್ಷ ರೂಪಾಯಿ ಪಾವತಿಸುವಂತೆ ನೋಟಿಸ್ ಕಳುಹಿಸಲಾಗಿದೆ. ನೋಟಿಸ್ ಸ್ವೀಕರಿಸಿದ 75 ವರ್ಷದ ರಾಜನ್, ಜಿಎಸ್ಟಿ ಮೊತ್ತವನ್ನು ನೋಡಿ ಶಾಕ್ ಆಗಿದ್ದಾರೆ.

ಮೂರು ವರ್ಷಗಳ ಹಿಂದೆ ರಾಜನ್ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ನಕಲಿ ಮಾಡಿ ಭವಾನಿ ವುಡ್ ಪ್ರಾಡಕ್ಟ್ಸ್ ಹೆಸರಿನಲ್ಲಿ ಕಂಪನಿಯನ್ನು ನೊಂದಾಯಿಸಲಾಗಿದೆ. ಮುವಾಟ್ಟುಪುಳ ಕೇಂದ್ರ ತೆರಿಗೆ ಮತ್ತು ಕೇಂದ್ರ ಅಬಕಾರಿ ಕಚೇರಿಯಲ್ಲಿ ಜಿಎಸ್ಟಿ ನೊಂದವಣಿಯಾಗಿದೆ.

ರಾಜನ್ ಹೆಸರಿಗೆ ಕಂಪನಿಯೊಂದು ನೋಂದವಣಿಯಾಗಿದ್ದು, ಮೂರು ವರ್ಷಗಳಲ್ಲಿ ಕಂಪನಿಯ  ಅಡಿಯಲ್ಲಿ ಕೋಟಿಗಟ್ಟಲೆ ವಹಿವಾಟು ನಡೆದಿರುವುದು ನೋಟಿಸ್ ಬಂದ ನಂತರವೇ ಗೊತ್ತಾಗಿದೆ. 

ರಾಜನ್ ಬಡವರಾಗಿದ್ದಾರೆ. ತಮ್ಮ ಪತಿ ಜೊತೆಗೆ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ನೋಟಿಸ್ ನೋಡಿ ಶಾಕ್ ಆಗಿದ್ದಾರೆ. ಈ ಘಟನೆಯ ಹಿಂದೆ ಇರುವ ವಂಚಕರನ್ನು ಪತ್ತೆ ಹಚ್ಚುವಂತೆ ಪೊಲೀಸರಲ್ಲಿ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ