ಪತ್ನಿ ಮೇಲಿನ ಕೋಪಕ್ಕೆ ಅತ್ತೆಯನ್ನು ಕಿಡ್ನಾಪ್ ಮಾಡಿದ ಅಳಿಯ
ಗುರುವಾರ, 27 ಫೆಬ್ರವರಿ 2020 (13:31 IST)
ಪತ್ನಿಯ ಮೇಲಿನ ಕೋಪಕ್ಕೆ ಅತ್ತೆಯನ್ನೇ ಅಳಿಯನೊಬ್ಬ ಕಿಡ್ನಾಪ್ ಮಾಡಿಸಿ ತಲೆ ಬೋಳಿಸಿ ಹಿಂಸೆ ನೀಡಿದ್ದಾನೆ.
ಮಂಗಳೂರಿನಲ್ಲಿ ಪ್ರಕರಣ ಬಯಲಿಗೆ ಬಂದಿದೆ. ತಮಿಳುನಾಡು ಮೂಲದ ಚಂದ್ರಶೇಖರ್ ಜೊತೆ ಕಲಾವತಿ ತನ್ನ ಮಗಳನ್ನು ಧಾರೆ ಎರೆದುಕೊಟ್ಟಿದ್ದರು. ಆದರೆ ಮಗಳ ಸಂಸಾರದ ವಿಷಯ ಕೋರ್ಟ್ ಮೆಟ್ಟಿಲೇರಿತ್ತು.
ಹೀಗಾಗಿ ರೋಸಿಹೋಗಿದ್ದ ಅಳಿಯ ಚಂದ್ರಶೇಖರ್, ಗುಂಡಾಗಳನ್ನು ಬಿಟ್ಟು ಅತ್ತೆ ಕಲಾವತಿಯನ್ನು ಕಿಡ್ನಾಪ್ ಮಾಡಿಸಿದ್ದಾನೆ. ಅಷ್ಟೇ ಅಲ್ಲ ತಲೆ ಬೋಳಿಸಿ ಹಲ್ಲೆ ನಡೆಸಿದ್ದಾರೆ.
ಇದೀಗ ಅಳಿಯ ಚಂದ್ರಶೇಖರ್ ವಿರುದ್ಧ ಮಂಗಳೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.