ಖಿನ್ನತೆಗೊಳಗಾಗಿದ್ದ ತಾಯಿ, ಮಗುವಿನ ಸಮೇತ ಆತ್ಮಹತ್ಯೆ
24 ವರ್ಷದ ಮಹಿಳೆ, 8 ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಮದುವೆಯಾಗಿ 9 ವರ್ಷಗಳ ಬಳಿಕ ದಂಪತಿಗೆ ಮಗುವಾಗಿತ್ತು. ಇದಾದ ಬಳಿಕ ಮಹಿಳೆ ಖಿನ್ನತೆಗೊಳಗಾಗಿದ್ದಳು.
ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ತೀವ್ರ ಸುಟ್ಟ ಗಾಯಗಳಿಂದಾಗಿ ತಾಯಿ, ಮಗು ಇಬ್ಬರೂ ಸಾವನ್ನಪ್ಪಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.