ಸರಗಳ್ಳರನ್ನು ಥಳಿಸಿದ ತಾಯಿ - ಮಗಳು: ವಿಡಿಯೋ ವೈರಲ್

ಬುಧವಾರ, 4 ಸೆಪ್ಟಂಬರ್ 2019 (17:33 IST)

ಕಳ್ಳರು ಎಷ್ಟೇ ಚಾಣಾಕ್ಷರಾದರೂ ಕೊನೆಗೊಂದು ದಿನ ಧರ್ಮದೇಟು ತಿನ್ನೋದು ಇಲ್ಲವೇ ಕೃಷ್ಣನ ಜನ್ಮಸ್ಥಳ ಸೇರಲೇಬೇಕು.

ಸರಗಳ್ಳರನ್ನು ಸಿನಿಮೀಯ ರೀತಿಯಲ್ಲಿ ಬಂಧನಕ್ಕೆ ಒಳಪಡಿಸುವಲ್ಲಿ ತಾಯಿ – ಮಗಳ ಜೋಡಿ ಯಶಸ್ವಿಯಾಗಿದೆ.

ರಸ್ತೆ ದಾಟುವಾಗ ಬೈಕ್ ಮೇಲೆ ಬಂದ ಕಳ್ಳರಿಬ್ಬರು ಚೈನ್ ಕದಿಯೋಕೆ ಮುಂದಾಗಿದ್ದಾರ. ತಕ್ಷಣ ಜಾಗೃತರಾದ ತಾಯಿ – ಮಗಳು ಬೈಕ್ ಸವಾರನಿಗೆ ತದಕಿದ್ದಾರೆ. ಬೈಕ್ ಮೇಲಿದ್ದ ಕಳ್ಳರಿಬ್ಬರೂ ಕೆಳಕ್ಕೆ ಬಿದ್ದಿದ್ದಾರೆ. ಅದರಲ್ಲಿ ಒಬ್ಬ ಓಡಿ ಹೋಗಿದ್ದರೆ, ಮತ್ತೊಬ್ಬನು ಸಖತ್ ಗೂಸಾ ತಿಂದಿದ್ದಾನೆ.

ತಾಯಿ – ಮಗಳ ಜೊತೆಗೆ ಸೇರಿಕೊಂಡ ಸ್ಥಳೀಯರು ಸರಗಳ್ಳನಿಗೆ ಸಖತ್ ಒದೆ ನೀಡಿದ್ದಾರೆ. ದೆಹಲಿಯ ನಂಗ್ಲೋಯಿ ಏರಿಯಾದಲ್ಲಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರಿಬ್ಬರನ್ನೂ ಪೊಲೀಸರು ಬಂಧನ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ