ಎಮಿಷನ್ ಟೆಸ್ಟ್ ದರ ಏರಿಕೆಯಿಂದ ವಾಹನಸವಾರರು ಕಂಗಾಲು
ಜಿಎಸ್ ಟಿ ದರ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ವಾಹನಗಳ ವಾಯು ಮಾಲಿನ್ಯ ತಪಾಸಣೆ ದರ ಏರಿಕೆ ಮಾಡಲಾಗಿದ್ದು, ಮಾಲೀಕರು ಅಸಮದಾನ ವ್ಯಕ್ತ ಪಡಿಸುತ್ತಿದ್ದಾರೆ . ಪರಿಸರ ಮಾಲಿನ್ಯಕ್ಕೆ ಅತಿ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ಆದರಿಂದ ಎಲ್ಲಾ ವಾಹನಗಳು ವಾಯು ಮಾಲಿನ್ಯ ತಪಾಸಣೆ ಮಾಡಿಸಬೇಕು. ರಾಜ್ಯದೆಲ್ಲೆಡೆ ಖಾಸಗಿ ಸಹಭಾಗಿತ್ವದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಪೊಲೀಸ್ ತಪಾಸಣೆ ವೇಳೆ ವಾಹನ ಸವಾರರು ವಾಯು ಮಾಲಿನ್ಯ ತಪಾಸಣೆ ದಾಖಲೆಯನ್ನು ತೋರಿಸಬೇಕು. ನಿಗಧಿತ ಸಮಯದಲ್ಲಿ ವಾಹನಗಳನ್ನು ವಾಯು ಮಾಲಿನ್ಯ ತಪಾಸಣೆಗೆ ಒಳಪಡಿಸಬೇಕಾಗುತ್ತದೆ. ಈಗ ಇದೆ ವಿಚಾರ ವಾಹನ ಸವಾರರ ತಲೆ ಕೆಡಿಸಿದೆ.