ಆರ್ ಎಸ್ಎಸ್ ಕಾನೂನಿಗಿಂತ ದೊಡ್ಡದಲ್ಲ ಎಂದ ಪ್ರಿಯಾಂಕ್ ಖರ್ಗೆ: ವಕ್ಫ್ ಇನ್ನೇನು ಎಂದ ನೆಟ್ಟಿಗರು

Krishnaveni K

ಶನಿವಾರ, 25 ಅಕ್ಟೋಬರ್ 2025 (10:16 IST)
ಬೆಂಗಳೂರು: ಏನೇ ಆದರೂ ಆರ್ ಎಸ್ಎಸ್ ಸಂಘಟನೆ ಕಾನೂನಿಗಿಂತ ದೊಡ್ಡದಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಹರಿಹಾಯ್ದಿದ್ದಾರೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಹಾಗಿದ್ರೆ ವಕ್ಫ್ ಕಾನೂನಿಗಿಂತ ದೊಡ್ಡದಾ ಎಂದು ಪ್ರಶ್ನೆ ಮಾಡಿದ್ದಾರೆ.

ಆರ್ ಎಸ್ಎಸ್ ನಿಷೇಧ ಕುರಿತಂತೆ ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಭಾರೀ ಸುದ್ದಿಯಲ್ಲಿದ್ದಾರೆ. ಆರ್ ಎಸ್ಎಸ್ ವರ್ಸಸ್ ಪ್ರಿಯಾಂಕ್ ಖರ್ಗೆ ಯುದ್ಧ ಈಗ ಕೋರ್ಟ್ ಅಂಗಳಕ್ಕೆ ಕಾಲಿಟ್ಟಿದೆ. ಚಿತ್ತಾಪುರದಲ್ಲಿ ನವಂಬರ್ 2 ರಂದು ಆರ್ ಎಸ್ಎಸ್ ಪಥಸಂಚಲನಕ್ಕೆ ಅವಕಾಶ ಕೊಡದಂತೆ ಮಾಡುವಲ್ಲಿ ಪ್ರಿಯಾಂಕ್ ಖರ್ಗೆಯೇ ಇದ್ದಾರೆ ಎನ್ನುವುದು ಈಗ ಗುಟ್ಟಾಗೇನೂ ಉಳಿದಿಲ್ಲ.

ಇದರ ನಡುವೆ ಫ್ರಂಟ್ ಲೈನ್ ಚಾನೆಲ್ ಗೆ ಪ್ರಿಯಾಂಕ್ ಖರ್ಗೆ ಸಂದರ್ಶನ ನೀಡಿದ್ದು ಆರ್ ಎಸ್ಎಸ್ ವಿರೋಧಿ ನಿಲುವಿನ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಆರ್ ಎಸ್ಎಸ್ ಯಾವತ್ತೂ ಕಾನೂನಿಗಿಂತ ಮೇಲೆ ಆಗಲು ಸಾಧ್ಯವಿಲ್ಲ. ಯಾರಿಗೂ ವಿಶೇಷ ಅಧಿಕಾರ ಇರಲು ಸಾಧ್ಯವಿಲ್ಲ. ಈ ದೇಶದ ಕಾನೂನು ಪಾಲಿಸಿ ಎಂದಷ್ಟೇ ನಾನು ಆರ್ ಎಸ್ಎಸ್ ಗೆ ಹೇಳುತ್ತಿರೋದು ಎಂದಿದ್ದಾರೆ.

ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದು ಹಾಗಿದ್ದರೆ ವಕ್ಫ್ ಬೋರ್ಡ್ ಗೂ ಇದೇ ನಿಯಮ ಅನ್ವಯವಾಗಲ್ಲ. ವಕ್ಫ್ ಬೋರ್ಡ್ ಕಾನೂನಿಗಿಂತ ದೊಡ್ಡದಾ? ವಕ್ಫ್ ಬೋರ್ಡ್ ವಿಚಾರದಲ್ಲಿ ನಿಮ್ಮ ನಿಲುವು ಯಾಕೆ ಈ ರೀತಿ ಇಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಆರ್ ಎಸ್ಎಸ್ ಜಪ ಬಿಟ್ಟು ನಿಮ್ಮ ಖಾತೆಯ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಹರಿಸಿ ಎಂದು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ