ಮಲ್ಲೇಶ್ವರಂ ಮಾರ್ಗವಾಗಿ ನವರಂಗ್ ಸರ್ಕಲ್ ಗೆ ಹೋಗೋ ರಸ್ತೆಯ ಮಧ್ಯೆ ಅರ್ಧ ಕಾಮಗಾರಿಯಾಗಿದೆ. ರಸ್ತೆಯ ಮಧ್ಯೆ ಅಡ್ಡಲಾಗಿ ಬ್ಯಾರಿಕೇಟ್ ಹಾಕಲಾಗಿದೆ. ಎಚ್ಚರ ತಪ್ಪಿದ್ರೆ ಕಾಮಗಾರಿ ಬಲಿ ತೆಗೆದುಕೊಳ್ಳಲು ಕಾದು ಕುಳಿತಿದೆ. BWSSB ಕಾಮಗಾರಿಯಿಂದ ಅರ್ಧ ರಸ್ತೆ ಕ್ಲೋಸ್ ಆಗಿಬಿಟ್ಟಿದೆ. ಇದರಿಂದ ಸವಾರರು ಕೊಂಚ ಎಚ್ಚರವಹಿಸಲೇಬೇಕು. ವೇಗವಾಗಿ ವಾಹನ ಚಲಾಯಿಸಿದ್ರೆ ಸಾವು ನಿಮ್ಮ ಕಣ್ಣು ಮುಂದೆಯೇ ಬರುತ್ತೆ. ಇನ್ನು ಈ ರಸ್ತೆಯಲ್ಲಿ ಕಳೆದು ಹದಿನೈದು ದಿನಗಳಿಂದ ಪ್ರತಿಬಾರಿ ಮಳೆಯಾದಾಗ ಒಳಚರಂಡಿ ನೀರು ರಸ್ತೆಯ ಮೇಲೆ ನಿಲ್ಲುತ್ತಿತ್ತು. ಈ ಹಿನ್ನೆಲೆ ಜಲಮಂಡಳಿ ಒಳಚರಂಡಿ ಅಗೆದು ಬ್ಯಾರಿಕೇಟ್ ಹಾಕಿ ಹಾಗೆ ಬಿಟ್ಟಿದೆ. ಇನ್ನು ರಾತ್ರಿಯ ವೇಳೆಯಂತೂ ಇಲ್ಲಿ ವಾಹನ ಚಲಾಯಿಸುವಾಗ ಗುಂಡಿಗೆ ಗಟ್ಟಿ ಮಾಡಿಕೊಂಡು ಹೋಗಬೇಕು. ಜಲಮಂಡಳಿಯ ಈ ಕಾಮಗಾರಿಯಿಂದಾಗಿ ಸ್ಥಳೀಯರು ಹಾಗೂ ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.