ಎಂಪಿ ಎಲೆಕ್ಷನ್ : ಕಾಂಗ್ರೆಸ್-ಜೆಡಿಎಸ್ ಸೀಟ್ ಹೊಂದಾಣಿಕೆಯಾಗಿದೆ ಎಂದ ಸಚಿವ

ಮಂಗಳವಾರ, 24 ಜುಲೈ 2018 (17:25 IST)
ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಅಗತ್ಯವಿದೆ. ಹೀಗಾಗಿ ಈಗಾಗಲೆ ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸೀಟ್ ಹೊಂದಾಣಿಕೆ ತೀರ್ಮಾನವಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ ಹೊಂದಾಣಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಅವರು,  ಕಾಂಗ್ರೆಸ್ ಮತ್ತು ಜೆಡಿಎಸ್ ಸೀಟ್ ಹಂಚಿಕೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಎಷ್ಟು ಸೀಟ್ ಜೆಡಿಎಸ್ ಗೆ ಬಿಟ್ಟುಕೊಡಬೇಕೆಂಬುದು ತೀರ್ಮಾನವಾಗಿಲ್ಲ. ಜೆಡಿಎಸ್ ಜೊತೆ ಸೀಟ್ ಹಂಚಿಕೆಯಿಂದ ಲಾಭ-ನಷ್ಟ ಎರಡು ಆಗುತ್ತದೆ. ಆದ್ರೂ ಕಾಂಗ್ರೆಸ್ ಹೊಂದಾಣಿಕೆಯಿಂದ ಎದುರಾಗುವ ಸಮಸ್ಯೆಗಳನ್ನ ಎದುರಿಸುತ್ತದೆ ಎಂದಿದ್ದಾರೆ. ಮಾಜಿ ಸಚಿವ .ಮಂಜು ಅವರು  ಹಾಸನ ಎರಡು ಮತಕ್ಷೇತ್ರ ಬಿಡುಕೊಡುವ ಪ್ರಶ್ನೆಯಿಲ್ಲ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಅದು ಮಾಜಿ ಸಚಿವ ಮಂಜು ಅವರ ವೈಯಕ್ತಿಕ ಹೇಳಿಕೆ ಮತ್ತು  ವಿಚಾರವಾಗಿದೆ ಎಂದಿದ್ದಾರೆ.

ನಾವು ಅಖಂಡ ಕರ್ನಾಟಕ ಪರಿಕಲ್ಪನೆ ಹೊಂದಿದ್ದೇವೆ. ಉತ್ತರ ಕರ್ನಾಟಕ ಅಭಿವೃದ್ಧಿ ಮಾಡೋಣ. ಆದ್ರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಬೇಡ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ