ರಾಹುಲ್ ಗಾಂಧಿ ‘ಅಪ್ಪುಗೆ’ ಟೀಕಿಸಿದ ಆರ್ ಜೆಡಿ ವಕ್ತಾರನಿಗೆ ಗೇಟ್ ಪಾಸ್

ಮಂಗಳವಾರ, 24 ಜುಲೈ 2018 (09:38 IST)
ನವದೆಹಲಿ: ಮೊನ್ನೆ ಸಂಸತ್ ಕಲಾಪದ ಸಂದರ್ಭ ಪ್ರಧಾನಿ ಮೋದಿಯನ್ನು ತಬ್ಬಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಟೀಕಿಸಿದ ಆರ್ ಜೆಡಿ ವಕ್ತಾರ ಶಂಕರ್ ಚರಣ್ ತ್ರಿಪಾಟಿ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ವಜಾಗೊಳಿಸಲಾಗಿದೆ.

ರಾಹುಲ್ ಪ್ರಧಾನಿಯನ್ನು ತಬ್ಬಿಕೊಂಡ ತಕ್ಷಣ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಶಹಬ್ಬಾಶ್ ಗಿರಿ ಕೊಟ್ಟಿದ್ದರು. ಆದರೆ ಅವರದೇ ಪಕ್ಷದ ವಕ್ತಾರ 15 ವರ್ಷಗಳಿಂದ ಸಂಸದರಾಗಿರುವ ರಾಹುಲ್ ರಂತಹ ವ್ಯಕ್ತಿಗೆ ಇಂತಹ ವರ್ತನೆ ಶೋಭೆಯಲ್ಲ ಎಂದು ಟೀಕಿಸಿದ್ದು, ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ.

ಅಷ್ಟೇ ಅಲ್ಲದೆ ರಾಹುಲ್ ರನ್ನು ಕಣ್ಸನ್ನೆ ಸ್ಟಾರ್ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಹೋಲಿಸಿದ್ದರು. ಇದೇ ಕಾರಣಕ್ಕೆ ಶಂಕರ್ ತ್ರಿಪಾಟಿಯನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ