ಮುಡಾದಲ್ಲಿ ಮತ್ತೊಂದು ಹಗರಣ: 3 ಸಾವಿರ ರೂ ಗೆ ಜಮೀನು, 300 ಕೋಟಿ ನಷ್ಟ

Krishnaveni K

ಶನಿವಾರ, 7 ಡಿಸೆಂಬರ್ 2024 (09:23 IST)
ಮೈಸೂರು: ಮುಡಾದ ಮತ್ತೊಂದು ಹಗರಣ ಬಯಲಾಗಿದ್ದು ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 300 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. 23 ನಿವೇಶನಗಳನ್ನು 3,000 ರೂ. ಗೆ ಮಾರಾಟ ಮಾಡಲಾಗಿದೆ ಎಂದು ಮುಡಾ ವಿರುದ್ಧ ಆರೋಪ ಕೇಳಿಬಂದಿದೆ.

ಮುಡಾ ಮಾಜಿ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸೇರಿಕೊಂಡು ಅಕ್ರಮ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಈ ಇಬ್ಬರೂ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಗೆ 23 ನಿವೇಶನಗಳನ್ನು ಕೇವಲ 3,000 ರೂ.ಗೆ ಐದೇ ದಿನದಲ್ಲಿ ದಿನೇಶ್ ಮಾಡಿಸಿಕೊಟ್ಟಿದ್ದರು ಎಂದು ತಿಳಿದುಬಂದಿದೆ.

ಮಂಜುನಾಥ್ ಗೆ ಯಾವ ನಿವೇಶನ ಕಳೆದುಕೊಂಡಿದ್ದಕ್ಕೆ ಬದಲಾಗಿ ನಿವೇಶನ ನೀಡಿದ್ದಾರೆ ಎಂಬ ಬಗ್ಗೆ ಉಲ್ಲೇಖವಿಲ್ಲ. ಪ್ರೋತ್ಸಾಹದಾಯಕವಾಗಿ ಸೈಟು ನೀಡಿರುವುದಾಗಿ ದಾಖಲೆ ತೋರಿಸಲಾಗಿದೆ. 5 ಲಕ್ಷ ರೂ. ಶುಲ್ಕ ಪಾವತಿ ಮಾಡಬೇಕಾದಲ್ಲಿ ಕೇವಲ 600 ರೂ. ಎಂದು ನಮೂದು ಮಾಡಲಾಗಿದೆ.

ಇದು ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರ ಯಾವ ಮಟ್ಟಿಗಿದೆ ಎನ್ನುವುದನ್ನು ತೋರಿಸುತ್ತದೆ. ಸಾಮಾನ್ಯರು ಭೂಮಿ ಕಳೆದುಕೊಂಡರೂ ಪರಿಹಾರವಾಗಿ ಪಡೆಯಲು ಹರಸಾಹಸ ಪಡೆಯಬೇಕಾಗುತ್ತದೆ. ಆದರೆ ಇಲ್ಲಿ ಲಕ್ಷಾಂತರ ಬೆಲೆ ಬಾಳುವ ಜಮೀನನ್ನು ಜುಜುಬಿ ಬೆಲೆಗೆ ನೀಡಿರುವುದು ಇಲ್ಲಿನ ಭ್ರಷ್ಟಾಚಾರಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ