ತುಮಕೂರು ಕ್ಷೇತ್ರದಲ್ಲಿ ಕೈ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮುದ್ದಹನುಮೇಗೌಡ ತಮ್ಮ ನಾಮಪತ್ರ ವಾಪಸ್ ಹಿಂಪಡೆಯುವುದು ಬಹುತೇಕ ಪಕ್ಕಾ ಆದಂತಿದೆ.
ನಾಮಪತ್ರ ಹಿಂಪಡೆಯುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ತುಮಕೂರು ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡಗೆ ಹೇಳಿರುವ ರಾಹುಲ್ ಸೂಚನೆಗೆ ಮುದ್ದಹನುಮೇಗೌಡ ಸಹಮತ ವ್ಯಕ್ತಪಡಿಸುತ್ತಾರಾ ಎನ್ನೋದು ಕುತೂಹಲ ಮೂಡಿಸಿದೆ.
ನಿಮಗೆ ಕ್ಷೇತ್ರ ತಪ್ಪಿಸುವ ಯಾವ ಉದ್ದೇಶವು ಇರಲಿಲ್ಲ. ರಾಷ್ಟ್ರೀಯ ಮಟ್ಟದ ದೃಷ್ಟಿಯಿಂದ ಕೆಲವೊಂದು ತೀರ್ಮಾನ ಮಾಡಬೇಕಾಯಿತು. ಪಕ್ಷದ ಹಿತದೃಷ್ಟಿಯಿಂದಷ್ಟೇ ತುಮಕೂರು ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದೇವೆ. ಯಾವ ಕಾರಣಕ್ಕೂ ನಿಮನ್ನ ಕಡೆಗಣಿಸುವುದಿಲ್ಲ. ಸೂಕ್ತ ಕಾಲದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆಯನ್ನು
ರಾಹುಲ್ ಗಾಂಧಿಯಿಂದ ಮುದ್ದಹನುಮೇಗೌಡ ಅವ್ರಿಗೆ ನೀಡಲಾಗಿದೆ ಎನ್ನಲಾಗಿದೆ.
ರಾಹುಲ್ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೂಡ ಚರ್ಚೆ ನಡೆಸಿದ್ದಾರೆ. ರಾಜ್ಯ ನಾಯಕರ ಮಾತಿಗೆ ಸೊಪ್ಪು ಹಾಕದ ಮುದ್ದಹನುಮೇಗೌಡ ಕೊನೆಗೂ ಪಟ್ಟು ಸಡಿಲಿಸಿದ್ದಾರೆ ಎನ್ನಲಾಗಿದೆ.