ಮುಂಬೈ ಕಾಟ : ಕಲಬುರಗಿಯಲ್ಲಿ ಮತ್ತೆ 7 ಕೊರೋನಾ

ಬುಧವಾರ, 20 ಮೇ 2020 (17:53 IST)
ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದ ಕಲಬುರಗಿ ಜಿಲ್ಲೆಯ 7 ಜನ ವಲಸಿಗರಲ್ಲಿ ಕೊರೋನಾ ಸೋಂಕು‌ ಪತ್ತೆಯಾಗಿದೆ.

ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಯಡ್ರಾಮಿ ತಾಲೂಕಿನ ಹಂಗರಗಾ(ಕೆ) ಗ್ರಾಮದ 22 ವರ್ಷದ ಯುವಕ, ಸುಂಬಡ ಗ್ರಾಮದ  35 ವರ್ಷದ ಮತ್ತು 46 ವರ್ಷದ ಪುರುಷ, ಅರಳಗುಂಡಗಿಯ 25 ವರ್ಷದ  ಯುವಕನಲ್ಲಿ‌ ಕೊರೋನಾ ಸೋಂಕು ಕಂಡುಬಂದಿದೆ.
ಜೇವರ್ಗಿ ತಾಲ್ಲೂಕಿನ ಯಾಳವಾರ ಗ್ರಾಮದ 22 ವರ್ಷದ ಯುವತಿಗೂ ಕೋವಿಡ್-19 ದೃಢವಾಗಿದೆ.

ಚಿತ್ತಾಪುರ ತಾಲ್ಲೂಕಿನ ಬಳವಡಗಿ ಗ್ರಾಮದ 26 ವರ್ಷದ ಯುವಕ ಮತ್ತು ಯಾಗಾಪುರದ 50 ವರ್ಷದ ವ್ಯಕ್ತಿಗೆ ಮಹಾಮಾರಿ ಸೋಂಕು ತಗುಲಿದೆ.

ಯಾಳವಾರ‌ ಗ್ರಾಮದ ಯುವತಿ ಹೊರತುಪಡಿಸಿ ಉಳಿದ 6 ಜನ ಸರ್ಕಾರಿ  ಕ್ವಾರಂಟೈನ್ ಸೆಂಟರ್‌ನಲ್ಲಿದ್ದವರಾಗಿದ್ದು, ಸೋಂಕು ದೃಢವಾದ‌ ನಂತರ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ ಎಂದು ಡಿ.ಸಿ. ಶರತ್‌ ಬಿ. ತಿಳಿಸಿದ್ದಾರೆ.

ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 134 ಕ್ಕೆ ಹೆಚ್ಚಳವಾಗಿದ್ದು, ಇದರಲ್ಲಿ 55 ಜನ ಗುಣಮುಖರಾಗಿದ್ದಾರೆ. ಉಳಿದಂತೆ 7 ಜನರು ನಿಧನಹೊಂದಿದ್ದು, 72 ಜನರಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ‌.ಸಿ.ಶರತ್ ಬಿ. ಮಾಹಿತಿ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ