ಹಣದ ಹೊಳೆಯನ್ನೇ ಹರಿಸಿದ್ದು ಎಷ್ಟು ದಿನ ನಡೆಯುತ್ತೆ ಗೊತ್ತಿಲ್ಲ ..!

ಗುರುವಾರ, 8 ಡಿಸೆಂಬರ್ 2022 (14:49 IST)
ಕಾಂಗ್ರೆಸ್ ಪಕ್ಷ ಎಲ್ಲ ಕೆಲಸ ಒಗ್ಗಟ್ಟಾಗಿ ಮಾಡಿತ್ತು.ಸೆಂಟ್ರಲ್ ಗುಜರಾತ್ ನಲ್ಲಿ ಯಾವ ಕಡೆ ಹೋದ್ರೂ ಬಿಜೆಪಿಯೇ ಇತ್ತು.ಪ್ರಧಾನಿ ಮೋದಿ ಇಷ್ಟೊಂದು ದೊಡ್ಡ ದೇಶವನ್ನು ಬಿಟ್ಟು ಜಿಲ್ಲಾ ಮಟ್ಟದಲ್ಲಿ ಪ್ರಚಾರ ಮಾಡಿದರು.ಬಹಳ ಕೆಳಮಟ್ಟಕ್ಕೆ ಹೋಗಿ ಪ್ರಧಾನಿ ಮೋದಿ ಪ್ರಚಾರ ಮಾಡಿದರು.ಹಣದ ಹೊಳೆ ಹರಿಸಿದರು ಹೀಗಾಗಿ ಕಷ್ಟ ಆಗಿದೆ.ರಾಜಕಾರಣದಲ್ಲಿ ಕೋಮು ಗಲಭೆ ಮಾಡಿಸುವುದು, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವದನ್ನು ಬಿಜೆಪಿ ಮಾಡ್ತಿದೆ ಎಂದು ಬಿಜೆಪಿ ವಿರುದ್ಧಬಕೆ ಎಚ್ ಮುನಿಯಪ್ಪ ಅಪಾದನೆ ಮಾಡಿದ್ದಾರೆ.
 
ಮಧ್ಯಪ್ರದೇಶ, ಮಹಾರಾಷ್ಟ್ರ ದಲ್ಲಿ ನಮ್ಮ ಸರ್ಕಾರ ಇದ್ದಾಗ ಅವರು ಇದನ್ನೆಲ್ಲ ಮಾಡಿದ್ದರು.ಪ್ರಜಾಪ್ರಭುತ್ವದ ಕಗ್ಗೊಲೆ ಇದು.ಇವತ್ತು ಬಿಜೆಪಿಯವರು ಸಂವಿಧಾನ ಪ್ರಜಾಪ್ರಭುತ್ವದ ವಿರುದ್ದವಾಗಿ ನಡೆದುಕೊಳ್ತಿದ್ದಾರೆ.ಚುನಾವಣೆಯಲ್ಲಿ ಗೆಲ್ಲುವ ವ್ಯವಸ್ಥೆ ಒಡೆದು ಆಳುವ ವ್ಯವಸ್ಥೆಯನ್ನು ಬಿಜೆಪಿ ಕರ್ನಾಟಕದಿಂದಲೇ ಪ್ರಾರಂಭ ಮಾಡಿದರು.ಹಣದ ಹೊಳೆಯನ್ನೇ ಹರಿಸಿದ್ದು ಎಷ್ಟು ದಿನ ನಡೆಯುತ್ತದೆ ಗೊತ್ತಿಲ್ಲ.ಒಬ್ಬ ಪ್ರಧಾನಿ ಜಿಲ್ಲೆ ಹಾಗೂ ನಗರಸಭೆಗೆ ಹೋಗಿ ಪ್ರಚಾರ ಮಾಡಿದ್ದನ್ನು ನಾನು ಯಾವತ್ತೂ ನೋಡಿಲ್ಲ.ಇದರಿಂದ ಪ್ರಧಾನಿ ಸ್ಥಾನಕ್ಕೆ ಕುಂದುಂಟಾಗಿದೆ ಅಂತ ನಾನು ಭಾವಿಸುತ್ತೇನೆ.ಕಾಂಗ್ರೆಸ್ ನವರು ಕೆಲಸ ಮಾಡಿದ್ದಾರೆ, ಗುಜರಾತ್ ನಲ್ಲಿ ಅನುಕೂಲ ಪರಿಸ್ಥಿತಿ ನಮಗೆ ಇರಲಿಲ್ಲ.ಜನಾದೇಶವನ್ನು ನಾವು ಒಪ್ಪುತ್ತೇವೆ ಎಂದು ಕೆ ಎಚ್ ಮುನಿಯಪ್ಪ ಹೇಳಿದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ