ಉಮೇಶ್ ಜಾದವ್ ಅವರ ಪತ್ನಿ ಹೆಸರಿನ ಮೂರ್ತಿ ಚಾರಿಟಬಲ್ ಟ್ರಸ್ಟ್​ಗೆ ಅಕ್ರಮವಾಗಿ ಮಂಜೂರು ಸೈಟು

ಗುರುವಾರ, 30 ಸೆಪ್ಟಂಬರ್ 2021 (21:34 IST)
ಬೆಂಗಳೂರು: ಕಲಬುರಗಿ ಸಂಸದ ಉಮೇಶ್ ಜಾದವ್ ಅವರ ಪತ್ನಿ ಹೆಸರಿನ ಮೂರ್ತಿ ಚಾರಿಟಬಲ್ ಟ್ರಸ್ಟ್​ಗೆ ಅಕ್ರಮವಾಗಿ ಮಂಜೂರು ಮಾಡಿದ್ದ ಸೈಟು ವರ್ಗಾವಣೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಕರ್ನಾಟಕ ಹೌಸಿಂಗ್ ಬೋರ್ಡ್​ಗೆ 1 ಲಕ್ಷ ರೂ ದಂಡ ವಿಧಿಸಿದೆ.
ಸೈಟನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹೀಗಾಗಿ ಸೈಟು ನೀಡುವಲ್ಲಿ ಶಾಮೀಲಾಗಿರುವ ಗೃಹ ಮಂಡಳಿ ಅಧಿಕಾರಿಗಳ ವಿರುದ್ಧ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆಯೇ, ಒಂದು ತಿಂಗಳಲ್ಲಿ ಸೈಟನ್ನು ಹಿಂಪಡೆದು ಸೂಕ್ತ ರೀತಿಯಲ್ಲಿ ಬಳಕೆ ಮಾಡಲು ಅದನ್ನು ವಿನಿಯೋಗಿಸಬೇಕು ಎಂದು ಹಂಗಾಮಿ ಸಿಜೆ ಎಸ್.ಸಿ.ಶರ್ಮಾ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಇದೇ ವೇಳೆ ಸಿಎ ಸೈಟನ್ನು ಷರತ್ತುಗಳ ಮೇರೆಗೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಮುಖ್ಯಸ್ಥಿಕೆಯ ಮೂರ್ತಿ ಚಾರಿಟಬಲ್ ಟ್ರಸ್ಟ್‌ಗೆ ನೀಡಿ, ಕಳೆದ ವರ್ಷ ಅದನ್ನು ಶುದ್ಧ ಮಾರಾಟ ಕ್ರಮ ಪತ್ರಕ್ಕೆ ಬದಲಾವಣೆ ಮಾಡಲಾಗಿದೆ. ಈ ಮೂಲಕ ಕೆಎಚ್​ಬಿ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಗೃಹ ಮಂಡಳಿಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ