ಕೊರಗಜ್ಜನಿಗೆ ಅವಮಾನ ಮಾಡಿದ ಮುಸ್ಲಿಂ ವರನ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳದಲ್ಲಿ ಕಾಸರಗೋಡಿನ ಉಪ್ಪಳ ಮೂಲದ ಬಶಿತ್ ಎಂಬ ವರ ಮದುವೆ ಕಾರ್ಯಕ್ರಮದಲ್ಲಿ ಈ ರೀತಿ ಅವಹೇಳನ ಮಾಡಿದ್ದ. ಬಂಟ್ವಾಳ ತಾಲೂಕಿನ ವಿಟ್ಲದ ಚೇತನ್ ಎಂಬವರು ಈ ಬಗ್ಗೆ ದೂರು ನೀಡಿದ್ದರು. ಕೊರಗಜ್ಜನ ವೇಷ ಹಾಕಿ ವರ ಮದುವೆ ಮನೆಯಲ್ಲಿ ಕುಣಿಯುವ ದೃಶ್ಯ ವೈರಲ್ ಆಗಿತ್ತು. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ವರ ಮತ್ತು ವಧುವಿನ ಕುಟುಂಬಸ್ಥರ ವಿರುದ್ಧ ಧರ್ಮ ದ್ವೇಷ, ಧರ್ಮವನ್ನು ಅವಮಾನಿಸಿದ ಕೃತ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.