ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆ-ಕಾಲೇಜಿಗೆ ಬಾರದಿರುವುದು ಕಳವಳಕಾರಿ-ಬಿ.ಸಿ. ನಾಗೇಶ್

ಭಾನುವಾರ, 20 ಫೆಬ್ರವರಿ 2022 (20:24 IST)
ಹಿಜಾಬ್ ವಿವಾದದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ಹಾಜರಾಗುತ್ತಿಲ್ಲ. ಇದು ಕಳವಳಕಾರಿ ವಿಚಾರವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯಲ್ಲಿ ರಾಜ್ಯ ನಡೆಸುತ್ತಿರುವ ನಡುವಲ್ಲೇ ಹಿಜಾಬ್ ವಿವಾದ ವೇಗವಾಗಿ ಹರಡುತ್ತಿದೆ. ವಿದ್ಯಾರ್ಥಿನಿಯರು ಶಿಕ್ಷಣ ತೊರೆಯುತ್ತಿರುವುದು ಕಳವಳಕಾರಿ ವಿಷಯ. ಒಂದು ಕಾಲೇಜಿನಿಂದ ಆರಂಭವಾದ ವಿವಾದ ಇದೀಗ ಎಲ್ಲೆಡೆ ಹಬ್ಬಿದೆ. ದೇಶ, ವಿದೇಶಗಳಲ್ಲಿಯೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಈ ವಿವಾದ ದೊಡ್ಡ ತಲೆನೋವಾಗಿದೆ.
ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಡ್ರೆಸ್ ಕೋಡ್ ನಿಗದಿ ಮಾಡಿಲ್ಲ. ಆದರೆ ಕೆಲವು ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಮಾಡಲಾಗಿದೆ, ಅದನ್ನು ಪಾಲಿಸುವಂತೆ ಮಾತ್ರ ಹೇಳಲಾಗಿದೆ.
ವಿದ್ಯಾರ್ಥಿನಿಯರು ಈ ಎಲ್ಲ ವಿಷಯಗಳನ್ನು ಪಕ್ಕಕ್ಕಿಟ್ಟು ತಮ್ಮ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ