ಕರ್ನಾಟಕದಲ್ಲಿರುವ ಮುಸ್ಲಿಂ ಮಹಿಳೆಯರಿಗೆ ಪಾಕ್‌ ಮೇಲೆ ಎಂತಹ ಪ್ರೇಮ, ಪಾಕ್ ಧ್ವಜಕ್ಕೆ ಗೌರವ

Sampriya

ಶನಿವಾರ, 26 ಏಪ್ರಿಲ್ 2025 (17:45 IST)
Photo Credit X
ಕಲಬುರಗಿ: 26 ಮಂದಿ ಮುಗ್ದ ಪ್ರವಾಸಿಗರ ಸಾವಿಗೆ ಕಾರಣರಾದ ಪಾಕ್ ಉಗ್ರರ ದಾಳಿಯನ್ನು ಖಂಡಿಸಿ, ಕಲಬುರಗಿಯಲ್ಲಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಾಕ್ ವಿರುದ್ಧ ಆಕ್ರೋಶ ಹೊರಹಾಕಿ, ಧ್ವಜವನ್ನು ರಸ್ತೆಗೆ, ಶೌಚಾಲಯಕ್ಕೆ ಅಂಟಿಸುವ ಮೂಲಕ ಆಕ್ರೋಶ ಹೊರಹಾಕಿದರು. ಈ ವೇಳೆ ಕೆಲ ಮುಸ್ಲಿಂ ಮಹಿಳೆಯರು ನೆಲಕ್ಕೆ ಅಂಟಿಸಿದ್ದ ಧ್ವಜವನ್ನು ತೆಗೆದು, ಪಾಕ್ ಪ್ರೇಮ ಮೆರೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮನಲ್ಲಿ ಅಮಾಯಕರ‌ ಮೇಲಿನ ಉಗ್ರರ ದಾಳಿ ಖಂಡಿಸಿ ನಗರದ ವಿವಿಧೆಡೆ ಕಡೆ ಪಾಕಿಸ್ತಾನದ ಧ್ವಜವನ್ನು ನೆಲಕ್ಕೆ ಅಂಟಿಸುವ ಮುಖಾಂತರ ಬಜರಂಗ ದಳದ ಕಾರ್ಯಕರ್ತರೂ ಆಕ್ರೋಶ ವ್ಯಕ್ತಪಡಿಸಿದರು.

ಬಜರಂಗದಳದ ಕಾರ್ಯಕರ್ತರು ನಗರದ ಜಗತ್ ವೃತ್ತ ಸೇರಿದಂತೆ ನಗರದ ಇತರೆ ಪ್ರಮುಖ ಪ್ರದೇಶಗಳಲ್ಲಿ ಪಾಕ್ ಧ್ವಜಗಳನ್ನು ರಸ್ತೆ, ಶೌಚಾಲಯ ಪ್ರದೇಶಗಳಲ್ಲಿ ಅಂಟಿಸಿದ್ದಾರೆ.

ವಿಚಾರ ತಿಳಿಯುತ್ತಿದ್ದ ಹಾಗೇ ಕೆಲ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗುಪ್ತಚರ ಇಲಾಖೆ ಸಿಬ್ಬಂದಿ, ಮತ್ತು ಬ್ರಹ್ಮಪುರ ಠಾಣೆಯ ಪೊಲೀಸರು ಅಂಟಿಸಿದ ಧ್ವಜವನ್ನು ತೆರವುಗೊಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ